'ಐಟಾ'ಯಿಂದ ಶೈಕ್ಷಣಿಕ ಕಾರ್ಯಾಗಾರ, ಸನ್ಮಾನ ಕಾರ್ಯಕ್ರಮ

ಪಾಣೆಮಂಗಳೂರು, ಜ.10: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ದ.ಕ. ಜಿಲ್ಲೆಯ ವತಿಯಿಂದ ಪಾಣೆಮಂಗಳೂರಿನ ದಾರುಲ್ ಇಸ್ಲಾಮ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಕೊಯ್ಯೂರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶೇಕ್ ಆದಮ್ ಸಾಹೇಬ್ ವಗ್ಗ ಮತ್ತು ನಿವೃತ್ತ ಶಿಕ್ಷಕರಾದ ಅಬ್ದುಲ್ ಸಲಾಮ್ ಬಂಟ್ವಾಳ, ಫಕ್ರುದ್ಧೀನ್ ಅಕ್ಕರಂಗಡಿ, ಬಿ. ಮುಹಮ್ಮದ್ ತುಂಬೆ, ಅಸ್ಮಾ ಬಾನು ಮಂಗಳೂರು, ನುಸ್ರತ್ ಫಾತಿಮ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಬದ್ರಿಯಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ, ಉಳ್ಳಾಲ ಸ್ಯೆಯದ್ ಮದನಿ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕ ಯಾಕೂಬ್ ಕೊಯ್ಯೂರ್ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾಹಿತಿ ನೀಡಿದರು. ಐಟಾ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಾಣೆಮಂಗಳೂರಿನ ದಾರುಲ್ ಇಸ್ಲಾಮ್ ಶಾಲೆಯ ಮುಖ್ಯ ಶಿಕ್ಷಕ ಹಮೀದ್ ಕೆ. ಮಾಣಿ, ಐಟಾ ದ.ಕ. ಜಿಲ್ಲಾ ಕಾರ್ಯದರ್ಶಿ ಹಂಝ ಯು.ಎನ್., ಹಿರಾ ವಿದ್ಯಾ ಸಂಸ್ಥೆಯ ಕರೆಸ್ಪಾಂಡೆಂಟ್ ರಹ್ಮತುಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಬ್ದುಲ್ಲ ತೀಫ್ ಆಲಿಯಾ ಕಿರಾಅತ್ ನೆರವೇರಿಸಿದರು, ಕಾವಳಕಟ್ಟೆ ಸರಕಾರಿ ಉರ್ದು ಶಾಲೆಯ ಶಿಕ್ಷಕ ರಿಯಾಝ್ ಸ್ವಾಗತಿಸಿದರು, ಕಲ್ಲಡ್ಕ ಅನುಗ್ರಹ ವಿದ್ಯಾ ಸಂಸ್ಥೆಯ ಕರೆಸ್ಪಾಂಡೆಂಟ್ ಅಮಾನುಲ್ಲಾ ಖಾನ್, ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಕ್ಬರ್ ಅಲಿ ಕ್ವಿಝ್ ಕಾರ್ಯಕ್ರಮ ನಿರ್ವಹಿಸಿದರು. ದಾರುಲ್ ಇಸ್ಲಾಮ್ ಶಾಲೆಯ ಶಿಕ್ಷಕ ನೂರುದ್ದೀನ್ ವಂದಿಸಿದರು. ಡಾ.ಮುಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿದರು.







