ಹೊಸದಿಲ್ಲಿ ಕೇಂದ್ರೀಯ ಸಂಸ್ಕೃತ ವಿವಿಗೆ ಡಾ. ಶ್ರೀನಿವಾಸ ವರಖೇಡಿ ಉಪಕುಲಪತಿ

ಉಡುಪಿ, ಜ.10: ಹೊಸದಿಲ್ಲಿಯ ಪ್ರತಿಷ್ಠಿತ ಕೇಂದ್ರೀಯ ಸಂಸ್ಕೃತ ವಿವಿಯ ನೂತನ ಉಪಕುಲಪತಿಗಳಾಗಿ ರಾಜ್ಯದ ಪ್ರಸಿದ್ಧ ವಿದ್ವಾಂಸ ಡಾ. ಶ್ರೀನಿವಾಸ ವರಖೇಡಿ ಅವನ್ನು ಕೇಂದ್ರಸರಕಾರ ನೇಮಿಸಿದೆ.
ಇದುವರೆಗೆ ನಾಗ್ಪುರದ ಕಾಳಿದಾಸ ವಿವಿ ಉಪಕುಪತಿಗಳಾಗಿದ್ದ ವರಖೇಡಿ ಅವರು ಕರ್ನಾಟಕದ ಹಾವೇರಿ ಜಿಲ್ಲೆಯವರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 12 ವರ್ಷ ಶ್ರೀಮನ್ನ್ಯಾಯಸುಧಾದಿ ಶಾಸ್ತ್ರಾಧ್ಯಯನ ನಡೆಸಿದ ಬಳಿಕ ಅಲ್ಲೇ ಕೆಲ ವರ್ಷ ಪ್ರಾಧ್ಯಾಪಕರೂ ಆಗಿ ಸೇವೆ ಸಲ್ಲಿಸಿದ್ದರು.
ಬಳಿಕ ಹೈದರಾಬಾದಿನ ಉಸ್ಮಾನಿಯಾ ವಿವಿ, ಕರ್ನಾಟಕ ವಿವಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಏಕಕಾಲಕ್ಕೆ ಮಹಾರಾಷ್ಟ್ರದ ಗೊಂಡವರಂ ವಿವಿ ಮತ್ತು ನಾಗ್ಪುರದ ಮಹಾಕವಿ ಕಾಳಿದಾಸ ವಿವಿ ಈ ಎರಡು ವಿವಿಗಳ ಉಪಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
Next Story





