ಶೀಘ್ರ ಸುರಕ್ಷಿತ, ಅನುಕೂಲಕರ ಇ-ಪಾಸ್ ಪೋರ್ಟ್: ಕೇಂದ್ರ ಸರಕಾರ

ಹೊಸದಿಲ್ಲಿ, ಜ. 10: ಕೇಂದ್ರ ಸರಕಾರ ದೇಶದಲ್ಲಿ ಶೀಘ್ರದಲ್ಲಿ ಇ-ಪಾಸ್ಪೋರ್ಟ್ ಸೇವೆ ಆರಂಭಿಸಲಿರುವುದರಿಂದ ಭಾರತೀಯ ಪ್ರಜೆಗಳು ಇನ್ನು ಮುಂದೆ ಭೌತಿಕ ಪಾಸ್ಪೋರ್ಟ್ ಅನ್ನು ಒಯ್ಯಬೇಕಾದ ಅಗತ್ಯತೆ ಬೀಳುವುದಿಲ್ಲ. ಭಾರತೀಯ ಪ್ರಜೆಗಳು ಶೀಘ್ರದಲ್ಲಿ ಇ-ಪಾಸ್ಪೋರ್ಟ್ ಪಡೆಯಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.
ಈಗ ಪರಿಚಯಿಸಲಾಗುತ್ತಿರುವ ಇ-ಪಾಸ್ ಪೋರ್ಟ್ ಸುರಕ್ಷಿತವಾಗಿರುವುದರಿಂದ ಕಳೆದು ಹೋಗುವ ಭೀತಿಯಿಲ್ಲ. ಅಲ್ಲದೆ, ಇದು ಸಾಂಪ್ರದಾಯಿಕ ಪಾಸ್ ಪೋರ್ಟ್ ಗಿಂತ ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಪಾಸ್ ಪೋರ್ಟ್ ಅನ್ನು ಪ್ರಸಕ್ತ ಕಿರುಪುಸ್ತಕದ ರೂಪದಲ್ಲಿ ನೀಡಲಾಗುತ್ತಿದೆ.
ಪಾಸ್ ಪೋರ್ಟ್ ಗಳು ಬಯೋಮೆಟ್ರಿಕ್ ದತ್ತಾಂಶದಿಂದ ಸುರಕ್ಷಿವಾಗಿರುತ್ತವೆ ಹಾಗೂ ಜಾಗತಿಕ ವಲಸೆ ಅಗತ್ಯತೆಯನ್ನು ಪೂರೈಸುತ್ತದೆ ಎಂದು ಅವರು ತಿಳಿಸಿಸಿದ್ದಾರೆ. ಈ ಇ-ಪಾಸ್ ಪೋರ್ಟ್ ವಂಚನೆ ಹಾಗೂ ಪ್ರಯಾಣಿಕರ ವಲಸೆಯ ವರ್ಧನೆಯನ್ನು ಇಳಿಕೆ ಮಾಡಲಿದೆ ಎಂದು ಸರಕಾರ ಪ್ರತಿಪಾದಿಸಿದೆ. ಇ-ಪಾಸ್ಪೋರ್ಟ್ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಘಟನೆಯ ಗುಣಮಟ್ಟವನ್ನು ಅನುಸರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸರಿ ಸುಮಾರು 20 ಸಾವಿರ ಅಧಿಕಾರಿಗಳು ಹಾಗೂ ರಾಯಭಾರಿಗಳಿಗೆ ಪ್ರಾಯೋಗಿಕ ನೆಲೆಯಲ್ಲಿ ಇ-ಪಾಸ್ಪೋರ್ಟ್ ನೀಡಿದೆ. ಈ ಇ-ಪಾಸ್ಪೋರ್ಟ್ ಎಲೆಕ್ಟ್ರಾನಿಕ್ ಮೈಕ್ರೋಪ್ರೊಸೆಸಸರ್ ಚಿಪ್ ಅನ್ನು ಹೊಂದಿದೆ. ಚಿಪ್ ಅಳವಡಿಸಿದ ಪಾಸ್ಪೋರ್ಟ್ನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಇರುವ ಲೋಗೊ ಕೂಡ ಇರಲಿದೆ.
ಇ ಪಾಸ್ ಪೋರ್ಟ್ ಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇ ಪಾಸ್ ಪೋರ್ಟ್ ಗಾಗಿ ಮಾಡಿಕೊಳ್ಳಲಾದ ಈ ಒಪ್ಪಂದಕ್ಕೆ ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮಗಳ ಎರಡನೇ ಹಂತದ ಭಾಗವಹಿ ಸಹಿ ಹಾಕಲಾಗಿತ್ತು. ಹಲವು ಸಂದರ್ಭಗಳಲ್ಲಿ ಪಾಸ್ ಪೋರ್ಟ್ ಪಡೆಯಲು ಕೇವಲ ಮೂರು ದಾಖಲೆಗಳು ಮಾತ್ರ ಸಾಕಾಗಿತ್ತು. ಆದರೆ, ಈಗ ಇ-ಪಾಸ್ಪೋರ್ಟ್ಗಾಗಿ ಈ ಮೂರು ದಾಖಲೆಗಳೊಂದಿಗೆ ಹಲವು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯತೆ ಇದೆ. ಇದು ಅಸ್ತಿತ್ವದಲ್ಲಿರುವ ನಿವಾಸದ ಪುರಾವೆ, ಜನ್ಮ ದಿನಾಂಕದ ಪುರಾವೆ ಹಾಗೂ ಇಸಿಆರ್ಯೇತರ ವರ್ಗದ ದಾಖಲೆಗಳು ಸೇರಿವೆ. ವಿಳಾಸ ದಾಖಲೆಯಾಗಿ ನೀರಿನ ಬಿಲ್, ದೂರವಾಣಿ ಅಥವಾ ಮೊಬೈಲ್ ಬಿಲ್, ವಿದ್ಯುತ್ ಬಿಲ್, ಐಡಿ ಕಾರ್ಡ್, ಗ್ಯಾಸ್ ಸಂಪರ್ಕದ ದಾಖಲೆ, ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದ ಅಥವಾ ಪಾಸ್ಬುಕ್ ಅನ್ನು ಬಳಸಬಹುದು. ಭಾರತದಲ್ಲಿ ಪ್ರಸಕ್ತ 36 ಪಾಸ್ ಪೋರ್ಟ್ ಕಚೇರಿ, 93 ಪಾಸ್ಪೋರ್ಟ್ ಸೇವಾ ಕೇಂದ್ರ (ಪಿಎಸ್ಕೆ) ಹಾಗೂ 426 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್ಕೆ) ಸೇರಿದಂತೆ 555 ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಇವೆ.







