ರಾಜನಾಥ್ ಸಿಂಗ್ ಗೆ ಕೋವಿಡ್ ಸೋಂಕು

ಹೊಸದಿಲ್ಲಿ, ಜ. 10: ತಾನು ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ತನಗೆ ಕೋವಿಡ್ ನ ಲಘು ಲಕ್ಷಣ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ. ‘‘ನನಗೆ ಕೋವಿಡ್ ಸೋಂಕು ತಗುಲಿದೆ. ಲಘು ಲಕ್ಷಣ ಕಂಡು ಬಂದಿದೆ. ನಾನು ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದೇನೆ’’ ಎಂದು ಸಿಂಗ್ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಇತ್ತೀಚೆಗೆ ತನ್ನೊಂದಿಗೆ ಸಂಪರ್ಕದಲ್ಲಿ ಇದ್ದ ಪ್ರತಿಯೊಬ್ಬರೂ ಐಸೋಲೇಶನ್ಗೆ ಹಾಗೂ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಅವರು ಮನವಿ ಮಾಡಿದ್ದಾರೆ.
Next Story





