ಆಶೀಶ್ ಆಯಿಲ್ ಮಾರಾಟ ಯತ್ನ: ಇಬ್ಬರ ಬಂಧನ
ಉಡುಪಿ, ಜ.12: ಗಾಂಜಾದಿಂದ ಉತ್ಪಾದಿಸಿರುವ ಆಶೀಶ್ ಆಯಿಲ್ನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿ ಸುತ್ತಿದ್ದ ಮಂದಿಯನ್ನು ಉಡುಪಿ ಸೆನ್ ಪೊಲೀಸರು ಪೆರಂಪಳ್ಳಿ ರೈಲ್ವೇ ಸೇತುವೆಯ ಬಳಿ ಜ.11ರಂದು ಬಂಧಿಸಿದ್ದಾರೆ.
ನಯಂಪಳ್ಳಿಯ ಗ್ಲಾಡನ್ ಕ್ಲೆವಿನ್ ರೊಡ್ರಿಗಸ್(21) ಹಾಗೂ ಪೆರಂಪಳ್ಳಿಯ ಹೃತಿಕ್ ಕೆ.ಎಂ.(21) ಬಂಧಿತ ಆರೋಪಿಗಳು. ಬಂಧಿತರಿಂದ 30ಸಾವಿರ ರೂ. ಮೌಲ್ಯದ 93 ಗ್ರಾಂ ತೂಕದ ಆಶೀಶ್ ಆಯಿಲ್ ಮತ್ತು 7ಸಾವಿರ ರೂ. ಮೌಲ್ಯದ ಎರಡು ಮೊಬೈಲ್, 40ಸಾವಿರ ರೂ. ವೌಲ್ಯದ ಸ್ಕೂಟರ್ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story