ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ನಾಯಕರ ವಿರುದ್ಧ ನಾಲ್ಕನೇ ಎಫ್ ಐಆರ್ ದಾಖಲು

ರಾಮನಗರ: ಬುಧವಾರ ನಾಲ್ಕನೇ ದಿನದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಕಾಂಗ್ರೆಸ್ ನಾಯಕರ ವಿರುದ್ಧ 30 ಮಂದಿ ವಿರುದ್ದ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ. ಸುರೇಶ್, ಟಿ.ಬಿ.ಜಯಚಂದ್ರ, ಕೃಷ್ಣ ಭೈರೇಗೌಡ, ಎಚ್. ಆಂಜನೇಯ, ಅಭಯ್ ಚಂದ್ರ, ಪ್ರಿಯಾಂಕ್ ಖರ್ಗೆ, ಸಲೀಂ ಅಹಮ್ಮದ್, ಧ್ರುವನಾರಾಯಣ, ಶರಣಪ್ರಕಾಶ ಪಾಟೀಲ, ಕಿಮ್ಮನೆ ರತ್ನಾಕರ, ಪರಮೇಶ್ವರ ನಾಯ್ಕ, ಕೆ.ವೈ. ನಂಜೇಗೌಡ, ಅಂಜಲಿ ನಿಂಬಾಳ್ಕರ್ ಸೇರಿದಂತೆ 30 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ನಿಷೇಧ ಹೇರಿದ ರಾಜ್ಯ ಸರಕಾರ
ರಾಮನಗರದ ನಗರದಾದ್ಯಂತ ಪೊಲೀಸ್ ಬಂದೋಬಸ್ತ್
ಪಾದಯಾತ್ರೆಗೆ ಐವರು ಡಿವೈಎಸ್ಪಿ, 16 ಇನ್ಸ್ಪೆಕ್ಟರ್, 27 ಪಿಎಸ್‌ಐ, 176 ಎಎಸ್ಐ, 800 ಕಾನ್ಸ್‌ಟೇಬಲ್‌ಗಳು, 4 ಡಿಎಆರ್ ಸೇರಿದಂತೆ 1,200 ಸಿಬ್ಬಂದಿ ನಿಯೋಜಿಸಲಾಗಿದೆ.
Next Story







