ಉಡುಪಿ ಜಿಲ್ಲೆಯಲ್ಲಿ 4,253 ಯುವ ಮತದಾರರ ನೋಂದಾಣಿ
ಒಟ್ಟು ಮತದಾರರು ಎಷ್ಟು ಗೊತ್ತೇ ?

ಉಡುಪಿ, ಜ.13: ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯ ವ್ಯಾಪ್ತಿಗೊಳಪಡುವ ಬೈಂದೂರು, ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ 2022ರ ಜ.1ನ್ನು ಅರ್ಹತಾ ದಿನಾಂಕ ವನ್ನಾಗಿಟ್ಟುಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಜ.13ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ, ಸಹಾಯಕ ಕಮೀಷನರ್ ಮತ್ತು ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 10,12,842 ಮತದಾರರಿದ್ದು, ಅದರಲ್ಲಿ ಪುರುಷರು 4,87,676, ಮಹಿಳೆಯರು 5,25,155 ಹಾಗೂ ಇತರರು 11 ಮಂದಿ ಇದ್ದಾರೆ. ಅದೇ ರೀತಿ ಬೈಂದೂರು-2,28,640 (ಪುರುಷ-1,11,518, ಮಹಿಳೆ-1,17,119, ಇತರೆ-3), ಕುಂದಾಪುರ- 2,03,705 (ಪು-97,807, ಮ-1,05,897, ಇ-1), ಉಡುಪಿ- 2,10,323 (ಪು-1,01,611, ಮ-1,08,712), ಕಾಪು-1,85,035 (ಪು-88,179, ಮ-96,849, ಇ-7), ಕಾರ್ಕಳ- 1,85,139 (ಪು-88,561, ಮ-96,578) ಮತದಾರರಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅವಧಿಯಲ್ಲಿ ಸೇರ್ಷಡೆಗಾಗಿ 7,862, ತೆಗೆದು ಹಾಕಲು-16,815, ತಿದ್ದುಪಡಿಗಾಗಿ-2,962 ಹಾಗೂ ವಿಧಾನ ಸಭಾ ವ್ಯಾಪ್ತಿಯಲ್ಲಿ ಬದಲಾವಣೆಗಾಗಿ-552 ಅರ್ಜಿಗಳು ಸಲ್ಲಿಕೆಯಾಗಿವೆ. ಯುವ ಮತದಾರರು ಒಟ್ಟು 4,253 ನೋಂದಾಣಿ ಆಗಿದೆ.
ಸಹಾಯವಾಣಿ ಕೇಂದ್ರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ -2022ಕ್ಕೆ ಸಂಬಂಧಿಸಿ ದಂತೆ ಮಾಹಿತಿಗಳನ್ನು ಸಾರ್ವಜನಿಕರು ಪಡೆಯುವ ಸಲುವಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ಮತದಾರರ ಸಹಾಯ ವಾಣಿ ಕೇಂದ್ರ-1950 ತೆರೆಯಲಾಗಿದೆ. ಕೇಂದ್ರದ 1950 ನಂಬರಿಗೆ ಸಾರ್ವ ಜನಿಕರು ಉಚಿತವಾಗಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಉಡುಪಿ ಜಿಲ್ಲಾ ಮಟ್ಟದಲ್ಲಿ ಹಾಗೂ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜ.25ರಂದು ರಾಷ್ಟ್ರಿಯ ಮತದಾರರ ದಿವಸವನ್ನು ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ಹೊಸತಾಗಿ ನೋಂದಾಣಿ ಮಾಡಿರುವ ಯುವ ಮತದಾರ ರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







