Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕೊರಗ ತನಿಯ ಹಿಂದೂ ಧರ್ಮದ ಸಂಕೇತ ಅಲ್ಲ:...

ಕೊರಗ ತನಿಯ ಹಿಂದೂ ಧರ್ಮದ ಸಂಕೇತ ಅಲ್ಲ: ಶ್ರೀಧರ ನಾಡ

‘ಕೊರಗಜ್ಜ ವೇಷದ ವಿಚಾರದಲ್ಲಿ ದ್ವೇಷ ಹರಡುವ ಹುನ್ನಾರ ವಿಫಲಗೊಳಿಸಿ’

ವಾರ್ತಾಭಾರತಿವಾರ್ತಾಭಾರತಿ13 Jan 2022 8:51 PM IST
share
ಕೊರಗ ತನಿಯ ಹಿಂದೂ ಧರ್ಮದ ಸಂಕೇತ ಅಲ್ಲ: ಶ್ರೀಧರ ನಾಡ

ಉಡುಪಿ, ಜ.13: ಕೊರಗ ತನಿಯ ಯಾವತ್ತೂ ಕೂಡ ಹಿಂದೂ ಧರ್ಮದ ಸಂಕೇತವಲ್ಲ. ಅವರು ಕರಾವಳಿ ಜಿಲ್ಲೆಗಳ ಕೊರಗ ಸಮುದಾಯ ಮತ್ತು ಆದಿಮ ಸಂಸ್ಕೃತಿಯ ಪ್ರತೀಕ. ಕೊರಗರು ಆಗಲಿ ಕೊರಗ ತನಿಯನ ಕುರಿತು ಮಾತನಾಡುವ ಮೊದಲು ನಿಮ್ಮವರು ಹಾಗೂ ನೀವು ಮಾಡಿದ, ಮಾಡುತ್ತಿರುವ ಮಹಾ ಮೋಸಗಳ ಬಗ್ಗೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ತಿಳಿಸಿದ್ದಾರೆ.

ಕೊರಗ ತನಿಯ ದೇವರು ಅಲ್ಲ, ದೈವವೂ ಅಲ್ಲ. ನಮ್ಮ ಸಮುದಾಯದ ಒಬ್ಬ ಗುರಿಕಾರ. ನಿಮ್ಮ ಮಡಿವಂತಿಕೆಯ ಮೋಸ ಕುತಂತ್ರಕ್ಕೆ ಬಲಿಯಾದವನು. ಕೊರಗ ತನಿಯ ಸಾಮಾಜಿಕ ನ್ಯಾಯದ ಪ್ರತಿಕಾ. ಹುಭಾಶಿಕನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಮೊಸದಿಂದ ಸಾಯಿಸಿ ಇಡೀ ಸಮುದಾಯವನ್ನು ನಿರ್ಗತಿಕ ಪರಿಸ್ಥಿತಿಗೆ ದೂಡಲಾಗಿದೆ. ಹಾಗೆ ಕೊರಗ ತನಿಯನ ಬದುಕು ಸಹ ದುರಂತ ಕಥೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

ಕೊರಗ ತನಿಯನಿಗೆ ಸಂಬಂಧಿಸದೆ ಇರುವ ವೇಷವನ್ನು ಕೊರಗ ತನಿಯನ ವೇಷವೆಂದು ಬಣ್ಣಿಸಿ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಪದೇ ಪದೇ ಕೊರಗಜ್ಜ ಮತ್ತು ಕೊರಗ ಸಮುದಾಯವನ್ನು ಅಪಮಾನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಹಿಂದೂ ಇರಲಿ ಮುಸ್ಲಿಂ ಇರಲಿ ಮದುವೆ, ಜಾತ್ರೆ, ತಂಬಿಲದಲ್ಲಿ ನಮ್ಮ ಗುರಿಕಾರ ಕೊರಗ ತನಿಯನ ವೇಷ ಹಾಕಲು ನಿಮಗೆ ಒಪ್ಪಿಗೆ ಕೊಟ್ಟವರು ಯಾರು. ಕೊರಗರ ವೇಷದಲ್ಲಿ ಕೊರಗ ಸಮುದಾಯದ ಘನತೆ ಗೌರವದ ಬದುಕಿಗೆ ಅವಮಾನ ಮಾಡಿ ಪದ ಪ್ರಯೋಗ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಯಕ್ಷಗಾನದಲ್ಲಿ ಬ್ರಾಹ್ಮಣ ವೇಷ, ಮುಸ್ಲಿಂ ವೇಷ ಹಾಕಿದಕ್ಕೆ ತಾವೆಲ್ಲರೂ ಬಹಳ ಪ್ರತಿಕ್ರಿಯೆ ನೀಡುವವರು, ವಿರೋಧಿಸುವವರು, ಕೊರಗರ ವೇಷ ಹಾಕಿ ನಮ್ಮನ್ನು ಹಿಯಾಳಿಸುವಿರಲ್ಲ ಆಗ ನಿಮ್ಮ ಹಿಂದೂ ಧರ್ಮದಲ್ಲಿ ಮತ್ತು ಈ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದಲ್ಲಿ ಕೊರಗರು ಇರುವುದಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ಕೊರಗ ಸಮುದಾಯದ ಅಸ್ತಿತ್ವವನ್ನು ಬುಡಮೇಲು ಮಾಡಿದವರು ಕೊರಗ ತನಿಯನನ್ನು ದೈವ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ವಿನಾಶದಂಚಿಗೆ ಬಂದಿರುವ ಕೊರಗ ಸಮುದಾಯದ ಉಳಿಯುವಿಗೆ ನಿಮ್ಮ ಕೊಡುಗೆ ಏನು ಎಂಬುದು ತಿಳಿಸಬೇಕು. ಕೊರಗ ತನಿಯ ಮತ್ತು ಕೊರಗ ಸಮುದಾಯವನ್ನು ರಾಜಕೀಯಕ್ಕೆ ಬಳಸಿ ಅಪಮಾನ ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಖಂಡಿಸುತ್ತದೆ. ಹಾಗೆ ಎಲ್ಲರೂ ಸಾಲೆತ್ತೂರಿನ ಕೊರಗಜ್ಜ ವೇಷದ ವಿವಾದಕ್ಕೆ ಸಂಬಂಧಿಸಿದಂತೆ ದ್ವೇಷ ಹರಡಲು ಮಾಡಿರುವ ಹುನ್ನಾರಗಳನ್ನು ವಿಫಲಗೊಳಿಸಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಒಂದು ಪಾಡ್ದಾನದ ಪ್ರಕಾರ ಮೈರಕ್ಕನ ಆಶ್ರಮದಲ್ಲಿ ಬೆಳೆದ ತನಿಯ ದೊಡ್ಡವನಾದ ಬಳಿಕ ಎಣಸೂರು ಬಾಳಿಕೆಯ ರಾಜ ದೈವಗಳ ನೇಮಕ್ಕೆ ತೆಂಗಿನ ಎಳೆ ಗರಿ, ಸೀಯಾಳ, ಬಾಳೆದಿಂಡು, ಸಿಂಗಾರ ಇತ್ಯಾದಿ ಹೊರೆಯನ್ನು ಹೊರಲು ಏಳು ಮಂದಿ ಕೆಲಸದವರು ಬರದೆ ಇದ್ದಾಗ ತನಿಯ ಒಬ್ಬನೇ ತಂದು ಕೊಡುತ್ತಾನೆ. ಆದರೆ ಕಾಡು ಕೊರಗ ಎನ್ನುವ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಬರಲು ನಿರಾಕರಿಸಲಾಗಿದೆ. ಇದನ್ನು ತನಿಯ ಪ್ರತಿಭಟಿಸುತ್ತಾನೆ. ತಾನು ತಂದ ವಸ್ತುಗಳು ಆಗುತ್ತದೆ, ಆದರೆ ನಾನು ಆಗುವುದಿಲ್ಲವೆ ಎಂದು ಪ್ರಶ್ನಿಸುತ್ತಾನೆ. ಅಲೆ ಪಕ್ಕದಲ್ಲಿ ಇರುವ ಮರದಿಂದ ತನ್ನ ಹೆಂಡತಿಗೆ ಮಾಪಲ ಹಣ್ಣು ಕೊಯ್ಯುತ್ತಾನೆ. ಆಗ ಅಲ್ಲಿನ ಮೈಸಂದಾ ಮತ್ತು ಕೊಡಂಗೆನಾರ್ ದೈವಗಳ ಕೆಂಗಣ್ಣಿಗೆ ಗುರಿಯಾಗಿ ಮಾಯವಾದನು. ಈಗಲೂ ಆ ದೈವಗಳು ಶ್ರೇಣೀಕಣದಲ್ಲಿ ಕೊರಗ ತನಿಯನಿಗಿಂತ ಮೇಲಿವೆ ಎಂಬುದನ್ನು ಗಮನಿಸಬೇಕು. ಹಾಗೆ ಇನ್ನೊಂದು ಪಾಡ್ದಾನದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಮಾಫಲ ಹುಳಿ ಕೊಯ್ಯಲು ಹೋಗುವಾಗ ಆತನನ್ನು ಬ್ರಾಹ್ಮಣರು ಕಡಿದು ಕೊಲ್ಲುತ್ತಾರೆ’ ಎಂದು ಶ್ರೀಧರ ನಾಡ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X