ಮೇಕೆದಾಟು ಯೋಜನೆ ನ್ಯಾಯಾಲಯದ ಮೂಲಕ ಪರಿಹಾರ ಮಾಡಿಕೊಳ್ಳಬೇಕೆ ಹೊರತು ಹೋರಾಟದಿಂದ ಅಲ್ಲ: ಎಚ್.ಡಿ.ದೇವೇಗೌಡ

ಮೈಸೂರು,ಜ.14: ಕಾಂಗ್ರೆಸ್ ನವರು ರಾಮನಗರದಿಂದಲೇ ಇನ್ನು ಹತ್ತು ಬಾರಿ ಮೇಕೆದಾಟುವಿಗೆ ಪಾದಯಾತ್ರೆ ಮಾಡಲಿ, ಆದರೆ ನ್ಯಾಯಾಲಯದ ಮೂಲಕ ಈ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕೆ ಹೊರತು, ಹೋರಾಟದಿಂದ ಅಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಲಹೆಯನ್ನು ನೀಡಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರದ ಸಾಲಿಗ್ರಾಮದಲ್ಲಿ ಶುಕ್ರವಾರ ತಾಲೂಕು ಜೆಡಿಎಸ್ ಕಛೇರಿ ಉದ್ಘಾಟಿಸಿ ಮಾತನಾಡಿದರು.
ನನ್ನ ಅನುಭವದಲ್ಲಿ ಹೇಳುವುದಾದರೆ. ಈ ತನಕ ನಾನು ಕಾವೇರಿ ವಿವಾದದ ವಿರುದ್ಧ ನ್ಯಾಯಾಲಯದ ಮೂಲಕ ಹೋರಾಟ ಮಾಡಿದ್ದೇನೆಯೇ ಹೊರತು, ಹೋರಾಟದಿಂದ ಅಲ್ಲ, ರಾಮನಗರ ನಮಗೆ ಕರ್ಮಭೂಮಿ, ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಲು ರಾಮನಗರವೇ ಕಾರಣ, ಅಷ್ಟೆ ಅಲ್ಲದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ರಾಮನಗರ ಕಾರಣ. ಆದರೆ ಕಾವೇರಿ ಹೋರಾಟ ಹೇಗೆ ಮಾಡಿದ್ದೇವೆ ಅಂತ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
Next Story