Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಮಿಷನ್‌ ಆರೋಪ: 'ತನಿಖೆ ನಡೆಸಿದರೆ...

ಕಮಿಷನ್‌ ಆರೋಪ: 'ತನಿಖೆ ನಡೆಸಿದರೆ 25ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ'; ಡಿ.ಕೆಂಪಣ್ಣ

''ಪ್ಯಾಕೇಜ್ ಟೆಂಡರ್ ರದ್ದತಿಗೆ ನ್ಯಾಯಾಂಗ ಹೋರಾಟಕ್ಕೂ ಸಿದ್ಧ''

ವಾರ್ತಾಭಾರತಿವಾರ್ತಾಭಾರತಿ15 Jan 2022 11:30 AM IST
share
ಕಮಿಷನ್‌ ಆರೋಪ: ತನಿಖೆ ನಡೆಸಿದರೆ 25ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ; ಡಿ.ಕೆಂಪಣ್ಣ

ತುಮಕೂರು: ''ರಾಜ್ಯ ಸರಕಾರ ಇದುವರೆಗೂ ರಾಜ್ಯದ ಗುತ್ತಿಗೆದಾರರಿಗೆ ಸುಮಾರು 22 ಸಾವಿರ ಕೋಟಿ ರೂಗಳನ್ನು ಬಾಕಿ ಉಳಿಸಿಕೊಂಡಿದೆ. ಎಲ್ಓಸಿ.ನೀಡುವಿಕೆಯಲ್ಲಿಯೂ ಶೇ 6ರಿಂದ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ.ಈ ಎಲ್ಲ ಹಗರಣಗಳ ಬಗ್ಗೆ ಸಂಘದ ಬಳಿ ಸ್ಪಷ್ಟ ದಾಖೆಗಳಿವೆ. ಸ್ವತಂತ್ರ ತನಿಖೆ ನಡೆಸಿದರೆ, 4 ಜನ ಹಿರಿಯ ಇಂಜಿನಿಯರ್ ಗಳು, 25 ಕ್ಕೂ ಹೆಚ್ಚು ಶಾಸಕರು ತಾವಿರುವ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ'' ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.

ನಗರದ ಕನ್ನಡ ಭವನದಲ್ಲಿ ತುಮಕೂರು ನಗರ ಗುತ್ತಿಗೆದಾರರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಪ್ಯಾಕೇಜ್ ಟೆಂಡರ್ ರದ್ದು ಪಡಿಸಲು ಹೈಕೋರ್ಟ್, ಸುಪ್ರಿಂ ಕೋರ್ಟ್ ಯಾವ ಹಂತದ ಹೋರಾಟಕ್ಕೂ ಸಂಘ ಸಿದ್ಧವಿದೆ. ಇದಕ್ಕೆ ರಾಜ್ಯದ ಎಲ್ಲ ಗುತ್ತಿಗೆದಾರರು ಕೈಜೋಡಿಸಬೇಕು ಎಂದರು.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳಲ್ಲಿ ಪ್ಯಾಕೇಜ್‍ ಟೆಂಡರ್ ಪದ್ದತಿಯನ್ನು ರದ್ದುಪಡಿಸಬೇಕೆಂಬುದು ಕರ್ನಾಟಕ ರಾಜ್ಯದ ಗುತ್ತಿಗೆದಾರರ ಸಂಘದ ಪ್ರಮುಖ ಅಜೆಂಡವಾಗಿದ್ದು,  ಇದಕ್ಕಾಗಿ ಯಾವ ರೀತಿಯ ನ್ಯಾಯಾಂಗ ಹೋರಾಟಕ್ಕೂ ಸಂಘ ಸಿದ್ಧವಿದೆ ಎಂದು ತಿಳಿಸಿದರು. 

ಸರಕಾರ 2018 ರಿಂದಲೂ ಲೋಕೋಪಯೋಗಿ ಇಲಾಖೆಯ ಎಸ್.ಆರ್. ರೇಟ್ ಬದಲಾವಣೆ ಮಾಡಿಲ್ಲ. ಕಳೆದ ನಾಲ್ಕುವರ್ಷಗಳಲ್ಲಿ ಮರಳು, ಸಿಮೆಂಟ್, ಜಲ್ಲಿ, ಲೇಬರ್ ಕೂಲಿ ಎಲ್ಲವೂ ನಿರೀಕ್ಷೆಗೂ ಮೀರಿ ಹೆಚ್ಚಾಗಿವೆ. ಕೇಳಿದರೆ ಇಂದು, ನಾಳೆ ಎಂದು ಸಬೂಬು ಹೇಳುತ್ತಲೇ ಬಂದಿದ್ದಾರೆ.ಅವರಿಗೆ ಯಾರು ಕಮಿಷನ್ ನೀಡುತ್ತಾರೋ ಅವರಿಗೆ ದಾಖಲಾತಿಗಳನ್ನು ಪರಿಶೀಲಿಸದೆ ಟೆಂಡರ್ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾರೆ.ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ,ಗುಣಮಟ್ಟದ ಕಾಮಗಾರಿ ಸಾಧ್ಯವೇ ಎಂದು ಡಿ.ಕೆಂಪಣ್ಣ ಪ್ರಶ್ನಿಸಿದರು.

ತುಮಕೂರು ನಗರ ಗುತ್ತಿಗೆದಾರರ ಸಂಘವನ್ನು ಉದ್ಘಾಟಿಸಿದ ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಸ್ಥಳೀಯ ಗುತ್ತಿಗೆದಾರರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡರೆ,ಇ ಟೆಂಡರ್, ಗ್ಲೋಬಲ್ ಟೆಂಡರ್ ಗಳಲ್ಲಿ ಸ್ಪರ್ಧೆ ಮಾಡಲು ಅವಕಾಶ ಪಡೆಯಬಹುದು.ಇತ್ತೀಚಿನ ದಿನಗಳಲ್ಲಿ ಶೇ30-40 ಕಡಿಮೆಗೆ ಬಿಡ್‍ಗೆ ಟೆಂಡರ್ ಆಗುತ್ತಿದೆ.ಇದಕ್ಕೆ ನಿಮ್ಮಲ್ಲಿರುವ ಒಗ್ಗಟ್ಟಿನ ಕೊರತೆಯೂ ಕಾರಣ, ಸಣ್ಣಪುಟ್ಟ ಕೆಲಸಗಳಿಗೆ ಪರಸ್ವರ ಕಿತ್ತಾಡದೆ, ಎಲ್ಲರೂ ಒಗ್ಗೂಡಿ ದೊಡ್ಡ ಮಟ್ಟದ ಟೆಂಡರ್ ಪಡೆದು ನಡೆಸಲು ಮುಂದಾಗಬೇಕು.ಆಗ ಆರೋಗ್ಯಕರ ಪೈಪೋಟಿ ಉಂಟಾಗುತ್ತದೆ.ನಿಮಗಳ ಬಗ್ಗೆ ನಮ್ಮ ಸಿಂಪಥಿ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.

ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ ಮಾತನಾಡಿ,ಪ್ಯಾಕೇಜ್ ಟೆಂಡರ್ ಎನ್ನುವುದು ಅಧಿಕಾರಿಗಳು, ರಾಜಕಾರಣಿಗಳು ಕಮಿಷನ್‍ನನ್ನು ಸೂಟಕೇಸ್ ಲೆಕ್ಕದಲ್ಲಿ ಪಡೆದುಕೊಳ್ಳಲು ಮಾಡಿಕೊಂಡ ಮಾರ್ಗವಾಗಿದೆ. ಯಾರೋ ಗೊತ್ತು ಗುರಿ ಇಲ್ಲದೆ ವ್ಯಕ್ತಿಗೆ, ಅವನು ಸುಳ್ಳು ದಾಖಲೆ ತೋರಿಸಿದರೂ ಪರಿಶೀಲಿಸದೆ ಟೆಂಡರ್ ನೀಡುವ ಪರಿಣಾಮ ಕೆಲವು ಕಾಮಗಾರಿಗಳು ಟೆಂಡರ ಆಗಿ ವರ್ಷ ಕಳೆದರೂ ಪೂರ್ಣವಾಗಿಲ್ಲ.ಟೆಂಡರ್ ಪಡೆಯುವ ವ್ಯಕ್ತಿ ಒಂದು ಗುದ್ದಲಿ, ಹಾರೆ,ಬಾಂಡ್ಲಿ ತರುವುದಿಲ್ಲ. ಎಲ್ಲವನ್ನು ಸ್ಥಳೀಯರಿಗೆ ಸಬ್ ಕಾಂಟ್ರಾಕ್ಟ್ ನೀಡಿ, ಹಣ ಬಾಚಿಕೊಂಡು ಪರಾರಿಯಾಗುತ್ತಾನೆ. ಕೆಳಮಟ್ಟದ ಅಧಿಕಾರಿಗಳು ಅವರ ಮೇಲೆ ಹಿಡಿತವಿಲ್ಲದೆ ಜನರ ಕೆಂಗಣ್ಣಿಗೆ ಗುರಿಯಾಗುತ್ತಾರೆ ಎಂದು ದೂರಿದರು.

ಸರಕಾರ ಅನುದಾನ ಹಂಚಿಕೆಯಲ್ಲಿಯೂ ತಾರತಮ್ಯವೆಸಗುತ್ತಿದೆ. ಒಂದು ಕ್ಷೇತ್ರಕ್ಕೆ 50 ಕೋಟಿ ನೀಡಿದರೆ, ಇನ್ನೋಂದು ಕ್ಷೇತ್ರಕ್ಕೆ 500 ಕೋಟಿ ನೀಡುತ್ತಿದೆ.ಬಾಯಿ ಇದ್ದವರೆ ಬದುಕುವಂತಾಗಿದೆ. ಈ ಬಗ್ಗೆ ವಿರೋಧಪಕ್ಷಗಳ ಶಾಸಕರು ಬಾಯಿ ಬಿಡುತ್ತಿಲ್ಲ. ಗುತಿಗೆದಾರರು ತಮ್ಮ ನಡುವಿನ ಕಿತ್ತಾಟ ಬಿಟ್ಟು ಒಗ್ಗೂಡಿದರೆ ಈ ಎಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದರು.

ತುಮಕೂರು ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ,ಸ್ಥಳೀಯರು ಗುತ್ತಿಗೆಕಾರ್ಯ ನಿರ್ವಹಿಸುವುದರಿಂದ ಉತ್ಪತ್ತಿಯಾಗುವ ಹಣ ಇಲ್ಲಿಯೇ ಖರ್ಚಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಹೆಚ್.ಎಂ.ಟಿ ಇದ್ದಕಾಲದಲ್ಲಿ ಸಂಬಳದ ದಿನ ಬಟ್ಟೆ ಅಂಗಡಿ, ದಿನಸಿ ಅಂಗಡಿ, ಚಪ್ಪಲಿ ಅಂಗಡಿಗಳ ಮುಂದೆ ಜನರ ಕ್ಯೂ ಇರುತ್ತಿತ್ತು. ಆ ರೀತಿಯಲ್ಲಿ ಸ್ಥಳೀಯರಿಗೆ ಅರ್ಥಿಕ ಉತ್ತೇಜನ ಸಿಗಬೇಕೆಂದರೆ ಗುತ್ತಿಗೆಗಳು ಸ್ಥಳೀಯರಿಗೆ ಸಿಗುವಂತಾಗಬೇಕು ಎಂದರು.

ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಆಶಾ ಮಾತನಾಡಿ,ಕೆಲವೊಂದು ಸಂದರ್ಭದಲ್ಲಿ ಹೊರಗಿನ ಗುತ್ತಿಗೆದಾರರನ್ನು ಹಿಡಿದು ಅವರಿಂದ ಕೆಲಸ ಮಾಡಿಸುವುದೇ ಕಷ್ಟವಾಗುತ್ತದೆ. ಸ್ಥಳೀಯರಾದರೆ ನಾಲ್ಕು ಜನರಿಗೆ ಅಂಜಿಯಾದರೆ ಬೇಗ ಬೇಗ ಕೆಲಸ ಮುಗಿಸುತ್ತಾರೆ. ಹಾಗಾಗಿ ಸಂಘ ಸ್ಥಾಪಿಸಿರುವ ಉದ್ದೇಶ ಒಳ್ಳೆಯದಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್ ಅಹಮದ್,ಧರಣೇಂದ್ರಕುಮಾರ್, ಸದಸ್ಯರಾದ ಮಂಜುನಾಥ್, ಮನೋಹರ, ಪಾಲಿಕೆಯ ಎಇಇಗಳಾದ ವಿನಯ್, ಸುರೇಶ್ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ತುಮಕೂರು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ.ಭಾನುಪ್ರಕಾಶ್,ಗೌರವಾಧ್ಯಕ್ಷ ಆರ್.ವಿಜಯಕುಮಾರ್,ಉಪಾಧ್ಯಕ್ಷ ಕೆ.ನಾಗರಾಜು, ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ಜಗದೀಶ್,ನಾಸೀರ್ ಅಹಮದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರುಗಳು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X