ಹರಿದ್ವಾರ ದ್ವೇಷಭಾಷಣ ಪ್ರಕರಣ: ಯತಿ ನರಸಿಂಗಾನಂದನನ್ನು ಬಂಧಿಸಿದ ಪೊಲೀಸರು

Photo: ndtv.com
ಹೊಸದಿಲ್ಲಿ: ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಮುಸ್ಲಿಮರ ವಿರುದ್ಧ ನರಮೇಧ ನಡೆಸುವ ಹೇಳಿಕೆ ನೀಡಿದ್ದ ಹಾಗೂ ಕಾರ್ಯಕ್ರಮದ ಮುಖ್ಯ ಆಯೋಜಕನಾಗಿದ್ದ ಯತಿ ನರಸಿಂಗಾನಂದನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಹತ್ಯಾಕಾಂಡಕ್ಕೆ ಕರೆ ನೀಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿದ ನಂತರ ಬಂಧನಕ್ಕೊಳಾದ ಎರಡನೇ ವ್ಯಕ್ತಿ ಇವರು.
ಅದಕ್ಕೂ ಮೊದಲು ವಸೀಮ್ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಯನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.
ಹತ್ಯಾಕಾಂಡಕ್ಕೆ ಕರೆ ನೀಡಿದ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದ ಬಳಿಕವಷ್ಟೇ ಪ್ರಕರಣ ಸಂಬಂಧಿಸಿ ಮೊದಲ ಬಂಧನವು ನಡೆದಿತ್ತು.
हरिद्वार में अनशन पर बैठे #YatiNarsinghanand narsinghanand महराज जी को अभी-अभी हरिद्वार पुलिस ने गिरफ़्तार कर लिया कोतवाली लेकर जा रही है धर्म संसद मामले को लेकर हुई गिरफ़्तारी @Champarni_Tariq@AshrafFem@ShyamMeeraSingh@ndtvindia
— Samiullah Alam (@Samiullahalam__) January 15, 2022
#HaridwarHateSpeech pic.twitter.com/LB0RUQAqtq







