Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 21ನೇ ವಯಸ್ಸಿನಲ್ಲಿ ಮದುವೆ: ಮಹಿಳಾ...

21ನೇ ವಯಸ್ಸಿನಲ್ಲಿ ಮದುವೆ: ಮಹಿಳಾ ಸಬಲೀಕರಣದತ್ತ ಹೆಜ್ಜೆಯೇ?

ಶಂತನು ದತ್ತಶಂತನು ದತ್ತ16 Jan 2022 12:05 AM IST
share
21ನೇ ವಯಸ್ಸಿನಲ್ಲಿ ಮದುವೆ: ಮಹಿಳಾ ಸಬಲೀಕರಣದತ್ತ ಹೆಜ್ಜೆಯೇ?

ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಅಥವಾ ಬಲವಂತದ ಮದುವೆಗಳು ಮತ್ತು ಗೃಹ ಹಿಂಸೆಯಿಂದ ತಪ್ಪಿಸಿಕೊಂಡು ಹಾಗೂ ಶಿಕ್ಷಣ ಸೌಲಭ್ಯಗಳ ಕೊರತೆಯಿಂದಾಗಿ ಓಡಿ ಹೋಗುವ ತಮ್ಮ ಪುತ್ರಿಯರನ್ನು ಶಿಕ್ಷಿಸಲು ಹೆತ್ತವರು ಹೆಚ್ಚಾಗಿ ಈ ಕಾಯ್ದೆಯನ್ನು ಬಳಸುತ್ತಾರೆ ಎಂಬುದಾಗಿ ಮಹಿಳಾ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪಿತೃಪ್ರಧಾನ ವ್ಯವಸ್ಥೆಯೊಂದರಲ್ಲಿ, ಮದುವೆ ವಯಸ್ಸಿನ ಮಿತಿಯಲ್ಲಿ ಆಗುವ ಬದಲಾವಣೆಯು ವಯಸ್ಸಿಗೆ ಬಂದಿರುವ ಮಕ್ಕಳ ಮೇಲೆ ನಿಯಂತ್ರಣ ಹೇರಲು ಅವಕಾಶ ನೀಡುವ ಸಾಧ್ಯತೆಗಳಿವೆ.


ಮಹಿಳೆಯರ ಮದುವೆ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವ ನಿರ್ಧಾರವೊಂದನ್ನು ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ತೆಗೆದುಕೊಂಡಿದೆ. ಇದರೊಂದಿಗೆ ಪುರುಷರು ಮತ್ತು ಮಹಿಳೆಯರ ಮದುವೆಯ ಕನಿಷ್ಠ ವಯಸ್ಸು ಸಮ-ಸಮವಾಗಿದೆ. ಹಲವು ವರ್ಷಗಳಿಂದ ಮದುವೆ ವಯಸ್ಸನ್ನು ಕ್ರಮೇಣವಾಗಿ ಏರಿಸುತ್ತಾ ಬರಲಾಗಿದೆ. 1929ರಲ್ಲಿ ಭಾರತದಲ್ಲಿ ಮಹಿಳೆಯರ ಮದುವೆಯ ಕಾನೂನುಬದ್ಧ ವಯಸ್ಸು 14 ಆಗಿತ್ತು. 1949ರಲ್ಲಿ ಅದನ್ನು 15ಕ್ಕೆ ಹೆಚ್ಚಿಸಲಾಯಿತು. ಬಳಿಕ, 1978ರಲ್ಲಿ ಮಹಿಳೆಯರ ಕನಿಷ್ಠ ಮದುವೆ ವಯಸ್ಸನ್ನು 18ಕ್ಕೆ ಮತ್ತು ಪುರುಷರ ವಯಸ್ಸನ್ನು 21ಕ್ಕೆ ಏರಿಸಲಾಯಿತು. ಹಾಗಾಗಿ, ಮದುವೆಯ ಕನಿಷ್ಠ ವಯಸ್ಸಿನಲ್ಲಿ ಈಗ ಮಾಡಲಾಗಿರುವ ಏರಿಕೆಯಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ.

ಆದರೆ, ಮಹಿಳೆಯರ ಮದುವೆಯ ಕನಿಷ್ಠ ವಯಸ್ಸಿನ ಏರಿಕೆಯನ್ನು ಹಲವರು ವಿರೋಧಿಸುತ್ತಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಬಾಲ್ಯ ವಿವಾಹ ಈಗಲೂ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18ಕ್ಕೆ ನಿಗದಿಪಡಿಸುವ ಹಾಲಿ ಕಾನೂನನ್ನು ಕೂಡ ಸರಿಯಾಗಿ ಅನುಷ್ಠಾನಗೊಳಿಸಲಾಗುತ್ತಿಲ್ಲ. ಹಾಗಾಗಿ, ಮದುವೆ ವಯಸ್ಸನ್ನು ಇನ್ನಷ್ಟು ಏರಿಸಿದರೂ ಅದರಿಂದಾಗುವ ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ಕಾಂಗ್ರೆಸ್ ನಾಯಕ ಪಿ. ಚಿದಂಬರಮ್ ಹೇಳಿರುವ ಮಾತನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ‘‘ಜನರಿಂದ ಸ್ವೀಕಾರಗೊಳ್ಳದ ಯಾವುದೇ ಕಾನೂನು ತಂದರೂ ಅದನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ.’’ ಹಾಗಾಗಿ, ಮಹಿಳೆಯರ ಮದುವೆ ವಯಸ್ಸಿನ ಏರಿಕೆಯನ್ನು ತಾತ್ವಿಕವಾಗಿ ಅನುಮೋದಿಸಿರುವ ಅವರು, ಕಾನೂನು ಜಾರಿಗೆ ಬರಬೇಕು, ಆದರೆ 2023ರಿಂದ ಅದನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಅದು ಕೂಡ, ಒಂದಿಡೀ ವರ್ಷ ಸಾರ್ವಜನಿಕರಿಗೆ ಈ ತಿದ್ದುಪಡಿಯ ಹಿಂದಿನ ಉದ್ದೇಶದ ಬಗ್ಗೆ ತಿಳುವಳಿಕೆ ನೀಡಿದ ಬಳಿಕ ಹಾಗೂ ಜನರ ಪ್ರತಿಕ್ರಿಯೆಯನ್ನು ಪಡೆದ ಬಳಿಕವಷ್ಟೇ ಈ ಕಾನೂನು ಜಾರಿಗೆ ಬರಬೇಕು ಎಂದಿದ್ದಾರೆ.

ಮಹಿಳೆಯರ ಕಾನೂನುಬದ್ಧ ಮದುವೆ ವಯಸ್ಸನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ಬಾಲ್ಯ ವಿವಾಹ (ತಿದ್ದುಪಡಿ) ಮಸೂದೆ, 2021 ದೇಶದಲ್ಲಿರುವ ಎಲ್ಲ ಸಮುದಾಯಗಳಿಗೆ ಅನ್ವಯವಾಗುತ್ತದೆ ಹಾಗೂ ಅದು ಅನುಷ್ಠಾನಕ್ಕೆ ಬಂದ ಬಳಿಕ ಅಸ್ತಿತ್ವದಲ್ಲಿರುವ ಎಲ್ಲ ಮದುವೆ ಮತ್ತು ವೈಯಕ್ತಿಕ ಕಾನೂನುಗಳು ರದ್ದುಗೊಳ್ಳುತ್ತವೆ. ತಡವಾಗಿ ಆಗುವ ಮದುವೆಗಳ ಆರೋಗ್ಯ ಲಾಭಗಳ ಬಗ್ಗೆ ಸಾರ್ವಜನಿಕ ಆರೋಗ್ಯ ಪರಿಣತರು ವಿವರಿಸುತ್ತಾರೆ. ಆದರೆ, ವಾಸ್ತವ ಏನೆಂದರೆ, ಸಾಮಾಜಿಕವಾಗಿ ಸ್ವೀಕಾರಗೊಳ್ಳದ ಕಾನೂನುಗಳನ್ನು ಅನುಷ್ಠಾನಗೊಳಿಸುವುದು ಕಷ್ಟ. ಸಮತಾ ಪಕ್ಷದ ಮಾಜಿ ಮುಖ್ಯಸ್ಥೆ ಜಯಾ ಜೇಟ್ಲಿ ಮತ್ತು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪೌಲ್ ನೇತೃತ್ವದ ಕಾರ್ಯಪಡೆಯೊಂದು, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತ ವರದಿಯೊಂದನ್ನು 2020 ಡಿಸೆಂಬರ್‌ನಲ್ಲಿ ಪ್ರಧಾನಿ ಕಚೇರಿ ಮತ್ತು ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿತ್ತು. ಮದುವೆ ವಯಸ್ಸನ್ನು ಏರಿಸುವಂತೆ ಆ ವರದಿಯು ಶಿಫಾರಸು ಮಾಡಿದೆ. ಪಿತೃಪ್ರಧಾನ ಮನೋಸ್ಥಿತಿಯನ್ನು ಸುಧಾರಿಸಲು ಹಾಗೂ ಶಿಕ್ಷಣದ ಲಭ್ಯತೆಯನ್ನು ಹೆಚ್ಚಿಸಲು ಪ್ರಬಲವಾದ ಆಂದೋಲನವೊಂದನ್ನು ಕೈಗೆತ್ತಿಕೊಳ್ಳಬೇಕು ಎಂಬುದಾಗಿಯೂ ಅದು ತನ್ನ ಶಿಫಾರಸಿನಲ್ಲಿ ಹೇಳಿತ್ತು. ಈ ಕಾರ್ಯಪಡೆಯ ವರದಿಯ ಹೊರತಾಗಿ, 2008ರ ಕಾನೂನು ಆಯೋಗದ ವರದಿಯೊಂದು, ಕುಟುಂಬ ಕಾನೂನಿಗೆ ತಿದ್ದುಪಡಿ ತರುವ ಕ್ರಮವಾಗಿ ಹುಡುಗರು ಮತ್ತು ಹುಡುಗಿಯರು- ಇಬ್ಬರ ಮದುವೆ ವಯಸ್ಸನ್ನೂ 18 ವರ್ಷಕ್ಕೆ ನಿಗದಿಪಡಿಬೇಕು, 21 ವರ್ಷಕ್ಕೆ ಅಲ್ಲ ಎಂಬುದಾಗಿ ಶಿಫಾರಸು ಮಾಡಿತ್ತು. ಹುಡುಗರು ಮತ್ತು ಹುಡುಗಿಯರ ಮದುವೆ ವಯಸ್ಸು ಒಂದೇ ಆಗಿರಬೇಕು ಎಂಬುದಾಗಿ 2018ರಲ್ಲಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವೂ ಶಿಫಾರಸು ಮಾಡಿತ್ತು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-2021)ಯ ಪ್ರಕಾರ, 20-24 ವರ್ಷ ವಯೋಗುಂಪಿನ ಮಹಿಳೆಯರ ಪೈಕಿ ಶೇ. 23.3 ಶೇಕಡ 18 ವರ್ಷಕ್ಕಿಂತ ಮೊದಲೇ ಮದುವೆಯಾಗಿದ್ದಾರೆ. 2006ರ ಬಾಲ್ಯ ವಿವಾಹ ಕಾಯ್ದೆ ನಿಷೇಧ ಕಾನೂನು ಬಾಲ್ಯ ವಿವಾಹಗಳನ್ನು, ಅದರಲ್ಲೂ ಮುಖ್ಯವಾಗಿ ಬಡವರ ಮನೆಗಳಲ್ಲಿ ನಡೆಯುವ ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ.

ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಅಥವಾ ಬಲವಂತದ ಮದುವೆಗಳು ಮತ್ತು ಗೃಹ ಹಿಂಸೆಯಿಂದ ತಪ್ಪಿಸಿಕೊಂಡು ಹಾಗೂ ಶಿಕ್ಷಣ ಸೌಲಭ್ಯಗಳ ಕೊರತೆಯಿಂದಾಗಿ ಓಡಿ ಹೋಗುವ ತಮ್ಮ ಪುತ್ರಿಯರನ್ನು ಶಿಕ್ಷಿಸಲು ಹೆತ್ತವರು ಹೆಚ್ಚಾಗಿ ಈ ಕಾಯ್ದೆಯನ್ನು ಬಳಸುತ್ತಾರೆ ಎಂಬುದಾಗಿ ಮಹಿಳಾ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪಿತೃಪ್ರಧಾನ ವ್ಯವಸ್ಥೆಯೊಂದರಲ್ಲಿ, ಮದುವೆ ವಯಸ್ಸಿನ ಮಿತಿಯಲ್ಲಿ ಆಗುವ ಬದಲಾವಣೆಯು ವಯಸ್ಸಿಗೆ ಬಂದಿರುವ ಮಕ್ಕಳ ಮೇಲೆ ನಿಯಂತ್ರಣ ಹೇರಲು ಅವಕಾಶ ನೀಡುವ ಸಾಧ್ಯತೆಗಳಿವೆ.
ನೂತನ ನಿರ್ಧಾರಕ್ಕೆ ಸಂಬಂಧಿಸಿ ಸಚಿವ ಸಂಪುಟದ ಘೋಷಿತ ಉದ್ದೇಶಗಳು ಒಳ್ಳೆಯದೇ ಆಗಿದ್ದರೂ, ಅದು ಬಳಸಿಕೊಳ್ಳಲು ಯತ್ನಿಸುತ್ತಿರುವ ವಿಧಾನಗಳು ಸಮರ್ಪಕವಾಗಿಲ್ಲ. ಹಾಗಾದರೆ, ಮುಂದಿನ ನಡೆಯೇನು?

ಮಸೂದೆಯ ಘೋಷಿತ ಉದ್ದೇಶಗಳನ್ನು ಸಾಧಿಸಲು ಇರುವ ಉತ್ತಮವಾದ, ಆದರೆ ಸುಲಭವಲ್ಲದ ಕೆಲಸವೆಂದರೆ, ಬೇಗ ಗರ್ಭಧಾರಣೆಯ ಅನನುಕೂಲಗಳ ಬಗ್ಗೆ ಬಾಲಕಿಯರಿಗೆ ಆಪ್ತ ಸಲಹೆ ನೀಡುವುದು ಹಾಗೂ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಅವರಿಗೆ ಸವಲತ್ತುಗಳನ್ನು ಒದಗಿಸುವುದು. ಮಹಿಳೆಯರ ಲೈಂಗಿಕ ಮತ್ತು ಪ್ರಜನನ ಆರೋಗ್ಯ ಮತ್ತು ಹಕ್ಕುಗಳ ಬಗ್ಗೆ ಸಾಮಾಜಿಕ ಜಾಗೃತಿ ಉಂಟು ಮಾಡುವತ್ತ ಗಮನ ಹರಿಸಬೇಕು. ಅದೇ ವೇಳೆ, ಬಾಲಕಿಯರು ಶಾಲೆ ಅಥವಾ ಕಾಲೇಜು ತೊರೆಯುವ ಅನಿವಾರ್ಯತೆ ಉಂಟಾಗದಂತೆ ನೋಡಿಕೊಳ್ಳಬೇಕು. ಈ ವಿಧಾನವನ್ನು ಬಿಟ್ಟು ಶಾಸನ ಸಭೆಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಎತ್ತಿಕೊಂಡರೆ ಹಾಗೂ ಸಾಮಾಜಿಕ ಸುಧಾರಣೆಯ ತನ್ನ ಪ್ರಯತ್ನಗಳ ಹಾದಿಯನ್ನು ತರಾತುರಿಯಲ್ಲಿ ಕಡಿತಗೊಳಿಸಲು ಮುಂದಾದರೆ, ಕಾನೂನು ಜನರ ತಿರಸ್ಕಾರಕ್ಕೆ ಗುರಿಯಾಗುವ ಅಪಾಯವಿದೆ ಹಾಗೂ, ಕಾನೂನನ್ನು ಉಲ್ಲಂಘಿಸುವ ನಮ್ಮ ರಾಷ್ಟ್ರೀಯ ಪ್ರವೃತ್ತಿಯು ಇನ್ನಷ್ಟು ಬಲಗೊಳ್ಳಬಹುದು.
ಅದೇ ವೇಳೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ 27 ಶೇಕಡಾದಿಂದ 23 ಶೇಕಡಾಕ್ಕೆ ಇಳಿದಿರುವುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಈ ಇಳಿಕೆಯು ನಗರ ಪ್ರದೇಶಗಳಲ್ಲಿ ಹೆಚ್ಚು ವೇದ್ಯವಾಗಿದೆ. ಗ್ರಾಮೀಣ ಭಾರತದಲ್ಲಿ, 20-24 ವರ್ಷ ವಯೋ ಗುಂಪಿನ ಪ್ರತಿ ನಾಲ್ವರು ಮಹಿಳೆಯರ ಪೈಕಿ ಒಂದಕ್ಕೂ ಹೆಚ್ಚಿನ ಮಹಿಳೆಗೆ 18 ವರ್ಷಕ್ಕಿಂತ ಮೊದಲೇ ಮದುವೆ ಆಗಿತ್ತು.

ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ. ಆರ್ಥಿಕ ಸಂಕಷ್ಟಕ್ಕೂ ಸಾಮಾಜಿಕ ಪಿಡುಗುಗಳಿಗೂ ಸಂಬಂಧವಿದೆ ಹಾಗೂ ಮಕ್ಕಳು ಇದರ ಬಲಿಪಶುವಾಗುತ್ತಾರೆ ಎನ್ನುವುದನ್ನು ಕೊರೋನ ವೈರಸ್ ಸಾಂಕ್ರಾಮಿಕವು ಜಗತ್ತಿಗೆ ಎತ್ತಿ ತೋರಿಸಿತು. ಬೇಗನೆ ಮದುವೆಯಾದರೆ ವೈಯಕ್ತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಳ ಅವಕಾಶವು ಕುಂಠಿತವಾಗುತ್ತದೆ ಎನ್ನುವುದನ್ನು ಸಮಾಜ ವಿಜ್ಞಾನ ಅಧ್ಯಯನವು ಸ್ಪಷ್ಟವಾಗಿ ತಿಳಿಸುತ್ತದೆ. ಭಾರತದಲ್ಲಿ ಈಗ ಶೇ. 60ಕ್ಕೂ ಹೆಚ್ಚು ಬಾಲಕಿಯರು ಹೈಸ್ಕೂಲ್‌ವರೆಗೆ ಹೋಗುತ್ತಾರೆ. ಆದರೆ, ಕಾನೂನು ಏನೇ ಹೇಳಿದರೂ, ಶತಮಾನಗಳಿಂದ ನಡೆದುಬಂದಂತೆ ಅರ್ಧಕ್ಕಿಂತಲೂ ಹೆಚ್ಚಿನ ಬಾಲಕಿಯರನ್ನು 18 ವರ್ಷಕ್ಕಿಂತ ಮೊದಲೇ ಮದುವೆ ಮಾಡಿಕೊಡಲಾಗುತ್ತದೆ.
ಲಿಂಗ ಸಮಾನತೆಯನ್ನು ಉತ್ತೇಜಿಸುವ ಪ್ರಗತಿಪರ ಕಾನೂನುಗಳಿಗೆ ಯಾವಾಗಲೂ ಸ್ವಾಗತ. ಸಾಮಾಜಿಕ ಒಮ್ಮತವನ್ನು ಸಾಧಿಸುವ ಚಿದಂಬರ್‌ರ ಸಲಹೆಯನ್ನು ಪರಿಗಣಿಸಬಹುದಾಗಿದೆ.

ಕೇರಳದ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಎಲ್ಲ ವಯೋಗುಂಪುಗಳ ಮಹಿಳೆಯರಿಗೆ ಅನುಮತಿ ನೀಡುವ 2018ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಉದಾಹರಣೆಯನ್ನು ಪರಿಗಣಿಸೋಣ. ಅಲ್ಲಿನ ಸಂಪ್ರದಾಯದ ಪ್ರಕಾರ, ಮಕ್ಕಳಾಗುವ ವಯಸ್ಸಿನ ಮಹಿಳೆಯರಿಗೆ ಆ ದೇವಸ್ಥಾನ ಪ್ರವೇಶಿಸಲು ಅನುಮತಿಯಿರಲಿಲ್ಲ. ಆ ದೇವಾಲಯದ ದೇವರನ್ನು ಬ್ರಹ್ಮಚಾರಿ ಎಂಬುದಾಗಿ ಪರಿಗಣಿಸಿರುವುದು ಇದಕ್ಕೆ ಕಾರಣವಾಗಿತ್ತು. ಈ ಪ್ರತಿಗಾಮಿ ಸಂಪ್ರದಾಯವನ್ನು ಹಲವು ಮಹಿಳಾ ಹೋರಾಟಗಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಸಂಪ್ರದಾಯವಾದಿ ಭಕ್ತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಲಿಂಗ ಸಮಾನತೆಯನ್ನು ಖಾತರಿಪಡಿಸುವ ಸಂವಿಧಾನದ ವಿಧಿಯನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿತು ಹಾಗೂ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಮಹಿಳಾ ಭಕ್ತರಿಗೆ ಅನುಮತಿ ನೀಡಿತು. ಕಾನೂನು ಸಮರದಲ್ಲಿ ಜಯ ಲಭಿಸಿತಾದರೂ, ಒಂದು ವರ್ಷದ ಬಳಿಕ, 2019ರಲ್ಲಿ 51ಕ್ಕಿಂತ ಹೆಚ್ಚು ಮಹಿಳೆಯರು ದೇವಸ್ಥಾನ ಪ್ರವೇಶಿಸಿರುವುದು ವರದಿಯಾಗಲಿಲ್ಲ. ದೇವಸ್ಥಾನ ಪ್ರವೇಶಿಸಿದವರಲ್ಲಿ ಹೆಚ್ಚಿನವರು ಸಾಮಾಜಿಕ ಹೋರಾಟಗಾರರೇ ಆಗಿದ್ದರು, ಸಂಪ್ರದಾಯವಾದಿ ಭಕ್ತೆಯರಾಗಿರಲಿಲ್ಲ.

ಈಗಲೂ ಅಷ್ಟೆ, ಮಹಿಳೆಯರ ಮದುವೆ ವಯಸ್ಸನ್ನು ಹೆಚ್ಚಿಸುವ ಕಾನೂನು ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತದೆ. ಸಂಸತ್ತು ಕಾನೂನೊಂದನ್ನು ರೂಪಿಸಬಹುದು, ರಾಷ್ಟ್ರಪತಿಯವರು ಅದಕ್ಕೆ ಅಂಕಿತ ಹಾಕಬಹುದು ಹಾಗೂ ಕಾನೂನಿನ ಬಗ್ಗೆ ಗಝೆಟ್ ಅಧಿಸೂಚನೆ ಹೊರಬೀಳಬಹುದು. ಆದರೆ, ಮಹಿಳೆಯರು ಹಿಂದೆ ಯಾವ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದರೋ ಅದೇ ವಯಸ್ಸಿನಲ್ಲಿ ಮದುವೆಯಾಗುವುದನ್ನು ಮುಂದುವರಿಸುತ್ತಾರೆ.

ಈ ನಡುವೆ, ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಮಹಿಳೆಯರ ಮದುವೆ ವಯಸ್ಸನ್ನು 21ಕ್ಕೆ ಹೆಚ್ಚಿಸುವುದಕ್ಕಾಗಿ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಮಸೂದೆಗಳನ್ನು ಯಾವುದೇ ಸಮಾಲೋಚನೆ ಮತ್ತು ಚರ್ಚೆಯಿಲ್ಲದೆ ಗಂಟೆಗಳಲ್ಲಿ ಮಂಡಿಸಿ, ಓದಿ ಹೇಳಿ ಹಾಗೂ ಅಂಗೀಕರಿಸುವ ಪ್ರವೃತ್ತಿಗೆ ಈ ಸರಕಾರವು ಪ್ರಸಿದ್ಧವಾಗಿದೆ. ಈ ಬಾರಿ ಕೂಡ ಅದನ್ನೇ ನಿರೀಕ್ಷಿಸಲಾಗಿತ್ತು. ಆದರೆ, ಸ್ವಾಗತಾರ್ಹ ಕ್ರಮವೊಂದರಲ್ಲಿ, ತನ್ನ ಹಾಲಿ ಪ್ರವೃತ್ತಿಯಿಂದ ದೂರ ಸರಿದ ಸರಕಾರವು ಮಸೂದೆ ಮಂಡನೆಯಾದ ಬಳಿಕ ಅದನ್ನು ಸಂಸತ್ ಸ್ಥಾಯಿ ಸಮಿತಿಯೊಂದರ ಪರಿಶೀಲನೆಗೆ ಒಪ್ಪಿಸಿದೆ. ಈಗ ಸಂಸದರ ಗುಂಪೊಂದು ವಿವಿಧ ಕ್ಷೇತ್ರಗಳ ಪರಿಣತರನ್ನು ಸಮಾಲೋಚನೆಗಾಗಿ ಕರೆಯಬಹುದಾಗಿದೆ ಹಾಗೂ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯ ಮೂಲಕ ಮಸೂದೆಯೊಂದು ಅಂಗೀಕಾರಗೊಳ್ಳುವ ಸಾಧ್ಯತೆಯಿದೆ. ಇಲ್ಲಿ ಸೀಮಿತ ರಾಜಕೀಯ ಹಸ್ತಕ್ಷೇಪ ಇರುತ್ತದೆ ಎಂಬುದಾಗಿ ಭಾವಿಸಬಹುದಾಗಿದೆ. ಈ ಸಮಾಲೋಚನೆಯ ಫಲಿತಾಂಶವನ್ನು ಹಾಗೂ ಅಂತಿಮ ಕಾನೂನನ್ನು ಕುತೂಹಲದಿಂದ ಕಾಯಲಾಗುತ್ತಿದೆ. ಅಂತಿಮ ಫಲಿತಾಂಶವು ಮಹಿಳಾ ಸಬಲೀಕರಣಕ್ಕೆ ಕಾರಣವಾಗಬೇಕೇ ಹೊರತು, ಮಹಿಳೆಯರನ್ನು ಮಕ್ಕಳಂತೆ ಕಾಣುವುದಕ್ಕೆ ಕಾರಣವಾಗಬಾರದು.

ಕೃಪೆ: countercurrents.org

share
ಶಂತನು ದತ್ತ
ಶಂತನು ದತ್ತ
Next Story
X