ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಗೆ ಡಬಲ್ಸ್ ಪ್ರಶಸ್ತಿ

Photo: twitter
ಹೊಸದಿಲ್ಲಿ, ಜ.16: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್ನಲ್ಲಿ ರವಿವಾರ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮೂರು ಬಾರಿಯ ವಿಶ್ವ ಚಾಂಪಿಯನ್ ಮುಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೆಟಿಯವಾನ್ರನ್ನು 21-16, 26-24 ನೇರ ಗೇಮ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಡಬಲ್ಸ್ ಪ್ರಸಸ್ತಿಯನ್ನು ಮುಡಿಗೇರಿಸಿಕೊಂಡರು.
ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಮೊದಲ ಗೇಮ್ನ್ನು ಎದುರಾಳಿಗಳಿಂದ ಹೆಚ್ಚು ಹೋರಾಟ ಎದುರಿಸದೆ 21-16 ರಿಂದ ಸುಲಭವಾಗಿ ಗೆದ್ದುಕೊಂಡರು. ಆದರೆ ಇಂಡೋನೇಶ್ಯದ ಅಹ್ಸಾನ್ ಹಾಗೂ ಸೆಟಿಯವಾನ್ ಎರಡನೇ ಗೇಮ್ನಲ್ಲಿ ತೀವ್ರ ಪೈಪೋಟಿ ಒಡ್ಡಿದರು. ಅಂತಿಮವಾಗಿ ಭಾರತದ ಜೋಡಿ ಎರಡನೇ ಗೇಮ್ನ್ನು 26-24 ಅಂತರದಿಂದ ಗೆದ್ದುಕೊಂಡು ಪ್ರಶಸ್ತಿ ಎತ್ತಿ ಹಿಡಿಯಿತು.
Next Story