"ನೀವು ಯಾವತ್ತೂ ನನ್ನ ನಾಯಕರಾಗಿರುತ್ತೀರಿ": ವಿರಾಟ್ ಕೊಹ್ಲಿಗೆ ಮುಹಮ್ಮದ್ ಸಿರಾಜ್ ಭಾವನಾತ್ಮಕ ಸಂದೇಶ

Photo: twitter
ಹೊಸದಿಲ್ಲಿ: ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಧನ್ಯವಾದ ತಿಳಿಸಿರುವ ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್ “ನೀವು ಯಾವಾಗಲೂ ನನ್ನ ನಾಯಕರಾಗಿರುತ್ತೀರಿ’’ ಎಂದು ಹೃದಯಸ್ಪರ್ಶಿಯಾಗಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ
ಕೊಹ್ಲಿ ಏಳು ವರ್ಷಗಳ ಕಾಲ ಭಾರತದ ಟೆಸ್ಟ್ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ನಂತರ ಕಳೆದ ಶನಿವಾರ ದಿಢೀರನೆ ನಾಯಕತ್ವದಿಂದ ಕೆಳಗಿಳಿದಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಸಿರಾಜ್, “ಕೊಹ್ಲಿ ಯಾವಾಗಲೂ ತನ್ನ ನಾಯಕನಾಗಿರುತ್ತಾರೆ’’ ಎಂದು ಹೇಳಿದರು.
"ನನ್ನ ಸೂಪರ್ಹೀರೋಗೆ, ನಿಮ್ಮಿಂದ ನನಗೆ ದೊರೆತ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾನು ಸಾಕಷ್ಟು ಕೃತಜ್ಞರಾಗಿರಲು ಸಾಧ್ಯವಿಲ್ಲ. ನೀವು ಯಾವಾಗಲೂ ನನ್ನ ಹಿರಿಯಣ್ಣ. ಇಷ್ಟು ವರ್ಷಗಳಿಂದ ನನ್ನನ್ನು ನಂಬಿದ್ದಕ್ಕಾಗಿ ಹಾಗೂ ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಕಿಂಗ್ ಕೊಹ್ಲಿಯವರೇ ನೀವು ಯಾವಾಗಲೂ ನನ್ನ ನಾಯಕನಾಗಿರುತ್ತೀರಿ ”ಎಂದು ಸಿರಾಜ್ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.