ಈ ಋತುವಿನ ನಂತರ ನಿವೃತ್ತಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ
ಸಾನಿಯಾ ಮಿರ್ಝಾ (PTI)
ಹೊಸದಿಲ್ಲಿ: ಈ ಋತುವಿನ ನಂತರ ನಿವೃತ್ತಿಯಾಗುವ ಯೋಜನೆ ಹಾಕಿಕೊಂಡಿರುವೆ ಭಾರತದ ಟೆನಿಸ್ ಪಟು ಸಾನಿಯಾ ಮಿರ್ಝಾ ಹೇಳಿದ್ದಾರೆ.
ಬುಧವಾರ ನಡೆದ ಆಸ್ಟ್ರೇಲಿಯನ್ ಓಪನ್ನ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಉಕ್ರೇನಿಯನ್ ಜೊತೆಗಾರ್ತಿ ನಾಡಿಯಾ ಕಿಚೆನೊಕ್ ಆರಂಭಿಕ ಸುತ್ತಿನಲ್ಲಿ ಸೋತಿದ್ದಾರೆ. ಈ ಸೋಲಿನ ನಂತರ ಸಾನಿಯಾ ಈ ಘೋಷಣೆ ಮಾಡಿದರು.
‘’ಈ ಋತುವಿನ ಕೊನೆಯವರೆಗೂ ತಾನು ಆಡಲು ಬಯಸಿದ್ದೇನೆ. ಆದರೆ ಅದರಿಂದ ಆಚೆಗೆ ಆಡಲು ಕಷ್ಟಕರವಾಗಿರುತ್ತದೆ’’ ಎಂದು ಇದುವರೆಗೆ ಆರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಡಬಲ್ಸ್ ವಿಭಾಗದ ಮಾಜಿ ನಂಬರ್ ಒನ್ ಆಟಗಾರ್ತಿ ಹೇಳಿದರು.
Next Story