ದೇಶದ ಪಪ್ರಥಮ ಸಾರ್ವತ್ರಿಕ ಮುಷ್ಕರದ ನೆನಪಿನಲ್ಲಿ ಪ್ರತಿಭಟನೆ

ಉಡುಪಿ, ಜ.19: ರೈತ ಕಾರ್ಮಿಕರ ಸಖ್ಯತೆಯ ದೇಶದ ಪಪ್ರಥಮ ಸಾರ್ವ ತ್ರಿಕ ಮುಷ್ಕರಕ್ಕೆ 40 ವರ್ಷಗಳು ಹಾಗೂ ಈ ಮುಷ್ಕರದಲ್ಲಿ ಹುತಾತ್ಮರಾದ 10 ಕೃಷಿ ಕೂಲಿಕಾರರ ನೆನಪಿನಲ್ಲಿ ಇಂದು ದೇಶಾದ್ಯಂತ ಮೌನ ಪ್ರತಿಭಟನೆಗೆ ಸಿಐಟಿಯು ನೀಡಿರುವ ಕರೆಯಂತೆ ಉಡುಪಿ ಬಸ್ ನಿಲ್ದಾಣದ ಸಿಐಟಿಯು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಿಐಟಿಯು ಉಡುಪಿ ತಾಲೂಕು ಮುಖಂಡರಾದ ಉಮೇಶ್ ಕುಂದರ್, ನಳಿನಿ, ಮೋಹನ್, ವಿನಯರಾಜ್, ಸರೋಜ ಉಪಸ್ಥಿತರಿದ್ದರು.
ಸಿಐಟಿಯು ಜಿಲ್ಲಾ ಖಜಾಂಚಿ ಶಶಿಧರ್ ಗೊಲ್ಲ ವಂದಿಸಿದರು. ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಎಸ್. ಕಾರ್ಯಕ್ರಮ ನಿರೂಪಿಸಿದರು.
Next Story