ಕೃಷ್ಣಾಪುರ ಪರ್ಯಾಯದ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಉಡುಪಿ, ಜ.19: ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದಿಂದ ಹೊರತರಲಾದ ಕೃಷ್ಣಾಪುರ ಪರ್ಯಾಯದ ವಿಶೇಷ ಅಂಚೆ ಲಕೋಟೆಯನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಮಂಗಳವಾರ ಕೃಷ್ಣಮಠದ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶುಭ ಹಾರೈಸಿದರು. ಮಠದ ವಿದ್ವಾಂಸ ಗೋಪಾಲ ಕೃಷ್ಣ ಉಪಾ ಧ್ಯಾಯ, ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್, ಕಚೇರಿ ಸಹಾಯಕಿ ಲೀಲಾವತಿ ತಂತ್ರಿ, ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಪೂಣಿಮಾರ್ ಜನಾರ್ದನ್ ಉಪಸ್ಥಿತರಿದ್ದರು.
ಪ್ರತೀ ಪರ್ಯಾಯ ಸಮಯದಲ್ಲಿ ಬಿಡುಗಡೆಗೊಳ್ಳುವ ಈ ವಿಶೇಷ ಅಂಚೆ ಲಕೋಟೆಗಳನ್ನು ಮಂಗಳೂರು ಕಲ್ಕೂರ ಪ್ರತಿಷ್ಟಾನದ ಪ್ರದೀಪ್ ಕುಮಾರ ಕಲ್ಕೂರ್ ಪ್ರಯೋಜಿಸುತ್ತಿದ್ದಾರೆ.
Next Story