ಹಾಸನ: ಅಕ್ರಮ ಸಂಬಂಧ ಆರೋಪ; ಸ್ನೇಹಿತರಿಂದಲೇ ವ್ಯಕ್ತಿಯ ಹತ್ಯೆ

ಸಾಂದರ್ಭಿಕ ಚಿತ್ರ
ಹಾಸನ: ಅಕ್ರಮ ಸಂಬಂಧ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದ ಖಾಸಗಿ ಲಾಡ್ಜ್ ನಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಹೊಸ ಕೋಟೆ ಗ್ರಾಮದ ಹರೀಶ್ ಕೊಲೆಯಾದ ವ್ಯಕ್ತಿಯಾಗಿದ್ದು, ಲಕ್ಷ್ಮಣ, ದಿಲೀಪ್, ಸುಶ್ಮಿತಾ ಎಂಬುವವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಮೊಬೈಲ್ ಕಂಪನಿ ಉದ್ಯೋಗಿ ಎಂದು ವಿಳಾಸ ಹೇಳಿ ಕೊಣನೂರು ಪಟ್ಟಣದ ಲಾಡ್ಜ್ ಒಂದರಲ್ಲಿ ಸುಶ್ಮಿತಾ ರೂಂ ಪಡೆದಿದ್ದಳು. ಬಳಿಕ ಅದೇ ಲಾಡ್ಜ್ ನಲ್ಲಿ ಕೊಲೆಯಾದ ಹರೀಶ್ ಹೆಸರು ಸೇರಿಸಿ ಲಕ್ಷ್ಮಣ ಮತ್ತೊಂದು ರೂಂ ಬಾಡಿಗೆ ಪಡೆದಿದ್ದಾರೆ ಎನ್ನಲಾಗಿದೆ.
ಮಾತುಕತೆಗೆಂದು ಹರೀಶ್ ನನ್ನು ಕರೆದು ಸುಶ್ಮಿತಾ ಬುಕ್ ಮಾಡಿದ್ದ ರೂಂನಲ್ಲಿ ಹರೀಶ್ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ಬಳಿಕ ಪತಿ ದಿಲೀಪ್ ಜೊತೆ ಸುಶ್ಮಿತಾ ಪರಾರಿಯಾಗಿದ್ದಾಳೆ ಎಂದು ಹೇಳಲಾಗಿದೆ.
ಕೊಠಡಿಯಲ್ಲಿ ಜೋರಾದ ಶಬ್ಧ ಕೇಳಿ ಬಂದ ಹಿನ್ನೆಲೆ ಮಾಲಕ ಹೊರಗಿನಿಂದ ಲಾಡ್ಜ್ ರೂಂ ಬಾಗಿಲು ಮುಚ್ಚಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೂಮಿನಲ್ಲಿ ಬಂದಿಯಾಗಿದ್ದ ಕೊಲೆ ಆರೋಪಿ ಲಕ್ಷ್ಮಣ ಸಿಕ್ಕಿ ಬಿದ್ದಿದ್ದು, . ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.







