ಟೋಕಿಯೋ ಪ್ಯಾರಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿಗೆ ಮಹೀಂದ್ರಾದಿಂದ ವಿಶೇಷ XUV700 ಕಾರು ಉಡುಗೊರೆ

Photo: Twitter/@AvaniLekhara
ಹೊಸದಿಲ್ಲಿ: ಟೋಕಿಯೊ ಪ್ಯಾರಾಲಿಂಪಿಕ್ನ ಚಿನ್ನದ ಪದಕ ವಿಜೇತೆ ಅವನಿ ಲೇಖರಾ ಅವರಿಗೆ ಮಹೀಂದ್ರಾ & ಮಹೀಂದ್ರಾ ವಿಶೇಷ ಕಸ್ಟಮ್-ನಿರ್ಮಿತ XUV700 ಗೋಲ್ಡ್ ಆವೃತ್ತಿ ಕಾರನ್ನು ಉಡುಗೊರೆಯಾಗಿ ನೀಡಿದೆ.
ವಿಶೇಷ XUV700 ನಲ್ಲಿ ದೈಹಿಕ ನ್ಯೂನ್ಯತೆ ಇರುವವರಿಗೆ ಸುಲಭವಾಗಿ ಏರಲು ಸಾಧ್ಯವಾಗುವಂತೆ ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಆಗಸ್ಟ್ 2021 ರಲ್ಲಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಫೈನಲ್ನಲ್ಲಿ ಚಿನ್ನ ಗೆದ್ದ ನೆನಪಿಗಾಗಿ ಲೇಖರಾ ಅವರಿಗೆ ವಿಶೇಷ ಎಸ್ಯುವಿಯನ್ನು ನೀಡುವುದಾಗಿ ಘೋಷಿಸಿದ್ದರು.
ಅವನಿ ಲೇಖರಾ ಪ್ಯಾರಾ ಒಲಿಂಪಿಕ್ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟಿದ್ದಾರೆ.
ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಸುಮಿತ್ ಆಂಟಿಲ್ ಅವರಿಗೆ ನೀಡಲಾದ XUV700 ಗೋಲ್ಡ್ ಆವೃತ್ತಿಗಳನ್ನು ವಿನ್ಯಾಸ ಮಾಡಿರುವ ಮಹೀಂದ್ರಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ಈ ಕಾರನ್ನೂ ವಿನ್ಯಾಸಗೊಳಿಸಿದ್ದಾರೆ.
Thank you @anandmahindra sir and the entire team at @Mahindra_Auto involved in making this customised car! Cars like these are a big step towards a more Inclusive India and I also look forward to many more of these on road!@MahindraXUV700 pic.twitter.com/sT89oAScui
— Avani Lekhara अवनी लेखरा (@AvaniLekhara) January 19, 2022







