ಭಾರತ ಭೂಪ್ರದೇಶದಿಂದ ಅಪ್ರಾಪ್ತ ಬಾಲಕನನ್ನು ಚೀನಿ ಸೇನೆ ಅಪಹರಿಸಿದೆ: ಸಂಸದ ತಪಿರ್ ಗಾವೊ ಆರೋಪ

ಸಾಂದರ್ಭಿಕ ಚಿತ್ರ (ndtv.com)
ಸಿಯಾಂಗ್: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಲುಂಗ್ಟಾ ಜೋರ್ ನಿಂದ 17 ವರ್ಷದ ಬಾಲಕನನ್ನು ಅಪಹರಿಸಿದೆ ಎಂದು ಸಂಸದ ತಪಿರ್ ಗಾವೊ ಬುಧವಾರ ಆರೋಪಿಸಿದ್ದಾರೆ.
ಅಪಹರಣಕ್ಕೊಳಗಾದವನನ್ನು ಮಿರಾಮ್ ಟ್ಯಾರೋನ್ ಎಂದು ಗುರುತಿಸಲಾಗಿದ್ದು, ಆತನನ್ನು ಭಾರತದ ಭೂಪ್ರದೇಶದಿಂದ ಮಂಗಳವಾರ ಅಪಹರಿಸಲಾಗಿದೆ ಎಂದು ಗಾವೊ ತಿಳಿಸಿದ್ದಾರೆ.
ಚೀನಾ ಸೈನಿಕರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಟ್ಯಾರೋನ್ನ ಸ್ನೇಹಿತ ಜಾನಿ ಯಾಯಿಂಗ್, ಗೆಳೆಯನ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ಗಾವೊ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಈ ಘಟನೆ ನಡೆದಿದೆ ಎಂದು ಸಂಸದರು ಹೇಳಿದ್ದಾರೆ.
ಬಾಲಕರಿಬ್ಬರೂ ಸ್ಥಳೀಯ ಬುಡಕಟ್ಟಿನ ಬೇಟೆಗಾರರು ಎಂದು ndtv ವರದಿ ಮಾಡಿದೆ.
Next Story





