ಮಿಝೋರಾಂನಲ್ಲಿ 5.6 ತೀವ್ರತೆಯ ಭೂಕಂಪನ, ಈಶಾನ್ಯ ರಾಜ್ಯಗಳಲ್ಲಿ ಕಂಪನದ ಅನುಭವ
ಚಂಫೈ(ಮಿಝೋರಾಂ): ಮಿಝೋರಾಂನ ಚಂಫೈ ಬಳಿ ಇಂದು ಮಧ್ಯಾಹ್ನ 5.6 ತೀವ್ರತೆಯ ಭೂಕಂಪನ ವರದಿಯಾಗಿದ್ದು, ಮಿಝೋರಾಂ, ಮಣಿಪುರ, ಅಸ್ಸಾಂ ಹಾಗೂ ಉತ್ತರ ಬಂಗಾಳದಲ್ಲಿ ಕಂಪನದ ಅನುಭವವಾಗಿದೆ.
ಭೂಕಂಪವು ಮಧ್ಯಾಹ್ನ 3:42 ಕ್ಕೆ ಮೇಲ್ಮೈಯಿಂದ 60 ಕಿ.ಮೀ. ಆಳದಲ್ಲಿ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು ಇಂಡೋ-ಮ್ಯಾನ್ಮಾರ್ ಗಡಿ ಪ್ರದೇಶದ ಚಂಫೈನಿಂದ 58 ಕಿ.ಮೀ. ಆಗ್ನೇಯದಲ್ಲಿದೆ.
ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ವರದಿಯಾಗಿಲ್ಲ.
Next Story