ಪ್ರಕಾಶ್ ಅಮ್ಮಣ್ಣಾಯರ ಜೀವನಾಮೃತ ಕೃತಿ ಲೋಕಾರ್ಪಣೆ

ಶಿರ್ವ, ಜ.22: ಬರಹಗಾರ ಕಾಪು ಪ್ರಕಾಶ್ ಅಮ್ಮಣ್ಣಾಯ ಅವರ ‘ಜೀವನಾಮೃತ’ ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಗುರುವಾರ ಕಾಪು ಶ್ರೀಜನಾರ್ದನ ದೇವಳದ ಸಭಾಂಗಣದಲ್ಲಿ ನಡೆದ ಸಾರಂಭದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ದಲ್ಲಿ ಚಲನಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಶುಬಾಶಂಸನೆ ಗೈದರು. ಕಾಪು ತಾಲೂಕು ಕಸಾಪ ಪೂರ್ವಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ಮಂಜುನಾಥ್ ವೈಟ್ಫೀಲ್ಡ್ ಬೆಂಗಳೂರು, ಶಾಂತಾ ದೊಡ್ಡಣ್ಣ, ವಿದ್ಯಾ ಅಮ್ಮಣ್ಣಾಯ, ನಮೃತಾ ಅಮ್ಮಣ್ಣಾಯ, ಸೀತಾರಾಮ ಭಟ್ ದಂಡತೀರ್ಥ, ಶ್ರಿನಿವಾಸ ಭಟ್ ಮಲ್ಲಾರು ಉಪಸ್ಥಿತರಿದ್ದರು. ವಿದ್ಯಾಧರ್ ಪುರಾಣಿಕ್ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.
Next Story