ವಿದೇಶದಿಂದ ಆಗಮಿಸಿದವರಿಗೆ ಐಸೋಲೇಶನ್ ಕೇಂದ್ರಗಳಲ್ಲಿ ವಾಸ್ತವ್ಯ ಕಡ್ಡಾಯವಲ್ಲ: ಕೇಂದ್ರ

ಹೊಸದಿಲ್ಲಿ, ಜ.22: ಭಾರತಕ್ಕೆ ಆಗಮಿಸುವ ಯಾವುದೇ ದೇಶದ ಪ್ರಯಾಣಿಕರಿಗೆ ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ಬಂದಲ್ಲಿ ಅವರು ಇನ್ನು ಮುಂದೆ ಐಸೋಲೇಶನ್ ಕೇಂದ್ರದಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ನಿಲ್ಲಬೇಕಿಲ್ಲ. ಆದರೆ ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ಅವರು ಮನೆಯಲ್ಲಿಯೇ ಕ್ವಾರಂಟೈನ್ಗೊಳಗಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಿಂದ ಆಗಮಿಸಿದವರಿಗೆ ಕೋವಿಡ್ ಪಾಸಿಟಿವ್ ಬಂದವರು , ತರುವಾಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಆನಂತರವೂ ಏಳು ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ ಹಾಗೂ ಭಾರತಕ್ಕೆ ಆಗಮಿಸಿದ ಎಂಟನೆ ದಿನದಂದು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಶನಿವಾರದಿಂದಲೇ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳು ಜಾರಿಗೆ ಬರಲಿವೆ.
ಇದಕ್ಕೆ ಮುನ್ನ ಅಪಾಯದಲ್ಲಿರುವವರು ಎಂದು ಪರಿಗಣಿಸಲ್ಪಟ್ಟವರು ಸೇರಿದಂತೆ ಯಾವುುದೇ ದೇಶದಿಂದ ಆಗಮಿಸುವ ಪ್ರಯಾಣಿಕರು ಐಸೋಲೇಶನ್ ಕೇಂದ್ರದಲ್ಲಿ ಉಳಿದುಕೊಳ್ಳಬೇಕಾಗುತ್ತಿತ್ತು ಹಾಗೂ ಮಾನದಂಡದ ಶಿಷ್ಟಾಚಾರಗಳಿಗೆ ಅನುಗುಣವಾಗಿ ಚಿಕಿತ್ಸೆ ಪಡೆಯಬೇಕಾಗುತ್ತಿತ್ತು.
ಸ್ಕ್ರೀನಿಂಗ್ ಸಂದರ್ಭದಲ್ಲಿ ರೋಗಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಲಾಗುವುದು ಹಾಗೂ ಅವರನ್ನು ವೈದ್ಯಕೀಯ ಘಟಕಕ್ಕೆ ಕೊಂಡೊಯ್ಯಲಾಗುವುದು.
ಒಂದು ವೇಳೆ ಪಾಸಿಟಿವ್ ಬಂದಲ್ಲಿ ಅವರ ಸಂಪರ್ಕಗಳನ್ನು ಗುರುತಿಸಲಾಗುವುದು ಹಾಗೂ ಕೋವಿಡ್ ಶಿಷ್ಟಾಚಾರದ ನಿಯಮಗಳಿಗೆ ಅನುಗುಣವಾಗಿ ನಿರ್ವಹಣೆಗಳನ್ನು ನಡೆಸಲಾಗುವುದು.
ನೆಗೆಟಿವ್ ಬಂದ ಆನಂತರವೂ ಎಂದು ಕೇಂದ್ರ ಸರಕಾರ ಗುರುವಾರ ಬಿಡುಗಡೆಗೊಳಿಸಿರುವ ಅಂತಾರಾಷ್ಟ್ರೀಯ ಆಗಮನಕ್ಕಾಗಿನ ಪರಿಷ್ಕೃತ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಿದೆ.







