'ನಾನು ಸಿಎಂ ಆಗಬೇಕು ಎಂದು ಕೂಗ್ಬೇಡಿ, ಒಳ ಸಂಚು ಶುರುವಾಗುತ್ತೆ': ಡಾ.ಜಿ.ಪರಮೇಶ್ವರ್

ಡಾ. ಜಿ.ಪರಮೇಶ್ವರ್
ತುಮಕೂರು: 'ನಾನು ಸಿಎಂ ಆಗಬೇಕು ಎಂದು ಕೂಗ್ಬೇಡಿ. ಒಳ ಸಂಚು ಶುರುವಾಗುತ್ತೆ ' ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಕೊರಟಗೆರೆಯ ಚಿಕ್ಕಗುಂಡಗಲ್ ನಲ್ಲಿ ರವಿವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ''ಸಿಎಂ ವಿಚಾರ ಎತ್ತಿದರೆ ನನಗೆ ಬಹಳ ಕಷ್ಟ ಆಗುತ್ತದೆ. ನೀವು ಇಲ್ಲಿ ಹೇಳೋಕೆ ಪ್ರಾರಂಭಿಸಿದರೆ. ಅಲ್ಲಿ ನನಗೆ ಹೊಡೆತ ಬೀಳೋಕೆ ಶುರುವಾಗುತ್ತದೆ'' ಎಂದು ಹೇಳಿದರು.
''ನೀವು ಮನಸ್ಸಿನಲ್ಲಿ ಬೇಕಾದರೇ ಹೇಳಿಕೊಳ್ಳಿ ಎಂದ ಅವರು, ನಿಮ್ಮ ಆಶೀರ್ವಾದ ಹಾಗೂ ಪರಮಾತ್ಮನ ಇಚ್ಛೆ ಇದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ'' ಎಂದರು.
Next Story





