ವೆಂಕಯ್ಯ ನಾಯ್ಡುಗೆ ಕೊರೋನ ಸೋಂಕು: ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು?

ಹೊಸದಿಲ್ಲಿ, ಜ.23: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ. ವೆಂಕಯ್ಯ ನಾಯ್ಡು ಅವರು ಕೋವಿಡ್19 ಸೋಂಕಿತರಾಗಿರುವುದು ಇದು ಎರಡನೆ ಸಲವಾಗಿದೆ.
‘‘ಪ್ರಸಕ್ತ ಹೈದರಾಬಾದ್ನಲ್ಲಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ರವಿವಾರ ಕೋವಿಡ್ ಪಾಸಿಟಿವ್ ಬಂದಿದೆ. ಒಂದು ವಾರದವರೆಗೆ ಅವರು ಸ್ವಯಂ ಐಸೋಲೇಶನ್ನಲ್ಲಿರಲು ನಿರ್ಧರಿಸಿದ್ದಾರೆ. ತನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಸ್ವಯಂ ಐಸೋಲೇಶನ್ನಲ್ಲಿರೇಕು ಹಾಗೂ ಕೋವಿಡ್19 ಪರೀಕ್ಷೆಗೊಳಗಾಗಬೇಕೆಂದು ಅವರು ಸಲಹೆ ಮಾಡಿದ್ದಾರೆ’’ ಎಂದು ಉಪರಾಷ್ಟ್ರಪತಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಬುಧವಾರ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುವ ಸಾಧ್ಯತೆಯಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





