ಜಿಲ್ಲಾ ಉಸ್ತುವಾರಿಗಳ ನೇಮಕ; ದ.ಕ. ಜಿಲ್ಲೆಗೆ ಸುನೀಲ್ ಕುಮಾರ್, ಎಸ್. ಅಂಗಾರಗೆ ಉಡುಪಿಯ ಜವಾಬ್ದಾರಿ

ಬೆಂಗಳೂರು, ಜ. 24: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆಯ ಬೆನ್ನಲ್ಲೇ ಸರಕಾರ, ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಸಹಿತ ಇಬ್ಬರು ಸಚಿವರನ್ನು ಹೊರತುಪಡಿಸಿ ಉಳಿದ ಎಲ್ಲ ಸಚಿವರಿಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಈ ಮಧ್ಯೆ ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಸೇರಿ ಮೂರು ಮಂದಿಗೆ ಕ್ರಮವಾಗಿ ಚಿತ್ರದುರ್ಗ-ಗದಗ, ಹಾಸನ-ಮಂಡ್ಯ, ರಾಯಚೂರು ಹಾಗೂ ಬೀದರ್ ಜಿಲ್ಲೆ ಸಹಿತ ತಲಾ ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ಕೆಲ ಸಚಿವರಿಗೆ ಈ ಹಿಂದೆ ನೀಡಿದ್ದ ಜಿಲ್ಲೆಗಳನ್ನು ಬದಲಾವಣೆ ಮಾಡಿ ಹೊಸ ಜಿಲ್ಲೆಗಳ ಜವಾಬ್ದಾರಿ ನೀಡಿದ್ದರೆ, ಕೆಲವರನ್ನು ಹಾಗೆಯೆ ಮುಂದುವರಿಸಲಾಗಿದೆ.
ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ, ಗೋವಿಂದ ಎಂ.ಕಾರಜೋಳ-ಬೆಳಗಾವಿ, ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು, ಬಿ.ಶ್ರೀರಾಮುಲು-ಬಳ್ಳಾರಿ, ವಿ.ಸೋಮಣ್ಣ-ಚಾಮರಾಜನಗರ, ಎಸ್.ಅಂಗಾರ-ಉಡುಪಿ, ಆರಗ ಜ್ಞಾನೇಂದ್ರ-ತುಮಕೂರು, ಡಾ.ಅಶ್ವತ್ಥ ನಾರಾಯಣ-ರಾಮನಗರ, ಸಿ.ಸಿ.ಪಾಟೀಲ್-ಬಾಗಲಕೋಟೆ, ಆನಂದ್ ಸಿಂಗ್-ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ- ಉತ್ತರ ಕನ್ನಡ.
ಪ್ರಭು ಚೌಹಾಣ್-ಯಾದಗಿರಿ, ಮುರುಗೇಶ್ ಆರ್.ನಿರಾಣಿ-ಕಲಬುರ್ಗಿ, ಶಿವರಾಮ್ ಹೆಬ್ಬಾರ್-ಹಾವೇರಿ, ಎಸ್.ಟಿ.ಸೋಮಶೇಖರ್-ಮೈಸೂರು, ಬಿ.ಸಿ.ಪಾಟೀಲ್-ಚಿತ್ರದುರ್ಗ ಮತ್ತು ಗದಗ, ಬಿ.ಎ.ಬಸವರಾಜ್-ದಾವಣಗೆರೆ, ಉಮೇಶ್ ಕತ್ತಿ-ವಿಜಯಪುರ, ಕೆ. ಗೋಪಾಲಯ್ಯ-ಹಾಸನ ಮತ್ತು ಮಂಡ್ಯ, ಶಶಿಕಲಾ ಜೊಲ್ಲೆ-ವಿಜಯನಗರ, ಎಂಟಿಬಿ ನಾಗರಾಜ್-ಚಿಕಬಳ್ಳಾಪುರ, ನಾರಾಯಣ ಗೌಡ-ಶಿವಮೊಗ್ಗ, ಬಿ.ಸಿ.ನಾಗೇಶ್-ಕೊಡಗು, ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ, ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು ಮತ್ತು ಬೀದರ್, ಹಾಲಪ್ಪ ಆಚಾರ್-ಧಾರವಾಡ, ಮುನಿರತ್ನ-ಕೋಲಾರ.









