ದೃಶ್ಯ ಕಲಾ ಕಾರ್ಯಾಗಾರ- ಕಲಾ ಪ್ರದರ್ಶನ
ಮಂಗಳೂರು, ಜ.24: ನಗರದ ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಜ. 25ರಿಂದ 27ರವರೆಗೆ ಮೂರು ದಿನಗಳ ದೃಶ್ಯ ಕಲಾ ಕಾರ್ಯಾಗಾರ ಮತ್ತು ಕಲಾ ಪ್ರದರ್ಶನ ಆಯೋಜಿಸಲಾಗಿದೆ.
ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಕಾರ್ಯಾಗಾರವನ್ನು ಕರ್ನಾಟಕ ಬ್ಯಾಂಕ್ ಮತ್ತು ಎಸ್.ಎಲ್. ಶೇಟ್ ಜುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್ ಪ್ರಾಯೋಜಿಸುತ್ತಿದೆ. ಕಲಾ ಪ್ರದರ್ಶನದೊಂದಿಗೆ ಜ. 25ರಂದು ಬೆಳಗ್ಗೆ 9.30ಕ್ಕೆ ಕಾರ್ಯಾಗಾರ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





