ಸುಳ್ಯ; ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪ: ಬಜರಂಗದಳ ಕಾರ್ಯಕರ್ತರ ನಡುವೆ ಮಾರಾಮಾರಿ

ಸುಳ್ಯ: ಬಾಲಕಿಯೋರ್ವಳನ್ನು ಕಾರಿನಲ್ಲಿ ಕರೆದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿರುವ ಘಟನೆ ನಗರದ ಪೈಚಾರು ಬಳಿ ವರದಿಯಾಗಿದೆ.
ಘಟನೆಗೆ ಸಂಬಂಧಿಸಿ ರಕ್ಷಿತ್ ಎಂಬ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಯುವಕನೊಬ್ಬ ಬಾಲಕಿ ವಿದ್ಯಾರ್ಥಿನಿಯನ್ನು ಪುತ್ತೂರಿನಿಂದ ಆಕೆಯ ಮನೆಗೆ ಬಿಡಲೆಂದು ಕಾರಲ್ಲಿ ಕರೆದುಕೊಂಡು ಹೋಗಿದ್ದನು. ಇದನ್ನು ಆರೋಪಿಸಿ ಯುವಕನಿಗೆ ಹಲ್ಲೆ ನಡೆಸಿದರೆಂದೂ ಹೇಳಲಾಗಿದೆ.
ಇದಾದ ಬಳಿಕ ಎರಡೂ ಕಡೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಎರಡೂ ಕಡೆಯವರೂ ಬಜರಂಗದಳದಲ್ಲಿ ಗುರುತಿಸಿಕೊಂಡಿರುವುದರಿಂದ ಬಜರಂಗದಳದ ಮುಖ್ಯ ಪದಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಪ್ರಕರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Next Story