ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್‌ನಿಂದ ನೆರವು

ಮಂಗಳೂರು, ಜ.24: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಿತ್ತಬೈಲ್ ಜಮಾಅತ್ ವ್ಯಾಪ್ತಿಯ ರೋಗಿ ಮುಹಮ್ಮದ್ ಮುಸ್ತಫಾ ಅವರಿಗೆ ಮಿತ್ತಬೈಲ್ ಜಮಾಅತ್ ಅಧ್ಯಕ್ಷ ಮುಹಮ್ಮದ್ ಸಾಗರ್ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ 25 ಸಾವಿರ ರೂ.ನ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಮಿತ್ತಬೈಲ್ ಜಮಾಅತ್‌ಗೊಳಪಟ್ಟ ಅರ್ಹ ಕುಟುಂಬಕ್ಕೆ ತಲಾ 10 ಕೆಜಿಯಂತೆ 15 ಬ್ಯಾಗ್ ಅಕ್ಕಿ ನೀಡಿದರು. ಅಲ್ಲದೆ ದಾರುಸ್ಸಫಕತ್ ಹಿರಿಯರ ಅನಾಥ ಮಂದಿರದಲ್ಲಿ ಅಡುಗೆ ಕೆಲಸ ಮಾಡುವ (ಕುಕ್) ವ್ಯಕ್ತಿಯೊಬ್ಬರು ಸಾಲದ ಮೊತ್ತ 21 ಸಾವಿರ ರೂ. ವನ್ನು ದಾರುಸ್ಸಫಕತ್ ಸಂಸ್ಥೆಯ ಅಧ್ಯಕ್ಷರೂ ಆದ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಹಸ್ತಾಂತರಿಸಿದರು.
ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಡಾ.ಮುಹಮ್ಮದ್ ಆರೀಫ್ ಮಸೂದ್, ಕಾರ್ಪೊರೇಟರ್ ಶಂಸುದ್ಧೀನ್ ಎಚ್‌ಬಿಟಿ, ಅಬೀದ್ ಜಲಿಹಾಲ್, ನಡುಪಳ್ಳಿ ಜುಮಾ ಮಸ್ಜಿದ್‌ನ ಮಾಜಿ ಕಾರ್ಯದರ್ಶಿ ಎನ್.ಕೆ. ಅಬೂಬಕರ್, ಮುಹಮ್ಮದ್ ಸಾಗರ್ ಉಪಸ್ಥಿತರಿದ್ದರು.





