ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ನಾಮಕರಣಕ್ಕೆ ಮನವಿ
ಮಂಗಳೂರು, ಜ.24: ನಗರದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಮಂಗಳೂರು ತಾಲೂಕು ಬಿಲ್ಲವ ಸಂಘದ ಮುಖಂಡರು ಮೇಯರ್‌ಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಎಂದು ಮರುನಾಮಕರಣ ಮಾಡುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಪೊಲೀಸ್ ಇಲಾಖೆಯಿಂದಲೂ ವರದಿ ಮಾಡಲಾಗಿದೆ. ಸರಕಾರದಿಂದ ಸೂಚನೆ ಬಂದ ಕೂಡಲೇ ನಾಮಕರಣ ಮಾಡಲಾಗುವುದು ಎಂದರು.
ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜೀತೇಂದ್ರ ಜೆ. ಸುವರ್ಣ, ಗೌರವಾಧ್ಯಕ್ಷ ರಂಜನ್ ಮಿಜಾರ್, ಕಾರ್ಯದರ್ಶಿ ಲೋಕನಾಥ ಪೂಜಾರಿ, ರವಿಕಲಾ, ಪಾರ್ವತಿ ಅಮೀನ್, ಶ್ರೀನಿವಾಸ್, ಸುರೇಶ್ಚಂದ್ರ ಕೋಟ್ಯಾನ್, ಪ್ರಜ್ವಲ್, ಸುನೀಲ್ ನಿಯೋಗದಲ್ಲಿದ್ದರು.
Next Story