'ಶ್ರೀಕಿ ಪೊಲೀಸರಿಗಿಂತ ಬುದ್ಧಿವಂತ' ಎಂಬ ಗೃಹ ಸಚಿವರ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಲೇವಡಿ
"ನಳಿನ್ ಕುಮಾರ್ ಕಟೀಲ್ ಅವರು ಶ್ರೀಕಿಗಿಂತಲೂ ಬುದ್ಧಿವಂತರು! ಅಲ್ಲವೇ ಗೃಹ ಸಚಿವರೇ?!'"

ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜ. 24: 'ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಯಾನೆ ಶ್ರೀ ಕೃಷ್ಣ ಪೊಲೀಸರಿಗಿಂತ ಬುದ್ದಿವಂತ! ನಳಿನ್ ಕುಮಾರ್ ಕಟೀಲ್ ಅವರು ಶ್ರೀಕಿಗಿಂತಲೂ ಬುದ್ಧಿವಂತರು! ಅಲ್ಲವೇ ಗೃಹ ಸಚಿವರೇ?!' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಅವರು, `ರಾಷ್ಟ್ರ ಮಟ್ಟದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡಿದರೂ ಕಟೀಲ್ ಅವರು ಮಾತ್ರ ತುಟಿಬಿಚ್ಚದೆ ತಮ್ಮ `ಬುದ್ಧಿವಂತಿಕೆ' ಪ್ರದರ್ಶಿಸಿದ್ದಾರೆ! ಈ ಮಾತಿನ ಮೂಲಕ ತನಿಖೆ ಹಳ್ಳ ಹಿಡಿಯುವ ಮುನ್ಸೂಚನೆ ನೀಡಿದಿರಾ ಗೃಹ ಸಚಿವರೇ?' ಎಂದು ಆರೋಪ ಮಾಡಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬಗ್ಗೆ ಗೃಹಸಚಿವರ ಹೇಳಿಕೆಯನ್ನು ಟ್ವೀಟ್ ಮಾಡಿದ ಪ್ರಿಯಾಂಕ್ ಖರ್ಗೆ, "ಈ ಮಾತಿನ ಮೂಲಕ ತನಿಖೆ ಹಳ್ಳ ಹಿಡಿಯುವ ಮುನ್ಸೂಚನೆ ನೀಡಿದಿರಾ ಗೃಹಸಚಿವರೇ?" ಎಂದು ಪ್ರಶ್ನಿಸಿದ್ದಾರೆ.
ಶ್ರೀಕಿ ಪೊಲೀಸರಿಗಿಂತ ಬುದ್ದಿವಂತ! ನಳಿನ್ ಕುಮಾರ್ ಕಟೀಲ್ ಅವರು ಶ್ರೀಕಿಗಿಂತಲೂ ಬುದ್ಧಿವಂತರು!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 24, 2022
ಅಲ್ಲವೇ ಗೃಹಸಚಿವರೇ?!
ರಾಷ್ಟ್ರ ಮಟ್ಟದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡಿದರೂ ಕಟೀಲ್ ಅವರು ಮಾತ್ರ ತುಟಿಬಿಚ್ಚದೆ ತಮ್ಮ 'ಬುದ್ಧಿವಂತಿಕೆ' ಪ್ರದರ್ಶಿಸಿದ್ದಾರೆ!
ಈ ಮಾತಿನ ಮೂಲಕ ತನಿಖೆ ಹಳ್ಳ ಹಿಡಿಯುವ ಮುನ್ಸೂಚನೆ ನೀಡಿದಿರಾ ಗೃಹಸಚಿವರೇ? pic.twitter.com/gGQ6nw1XU8







