ಉಡುಪಿ : ನಾರಾಯಣ ಗುರುಗಳ ಸ್ತಬ್ಧಚಿತ್ರ ಜಾಥಾಕ್ಕೆ ದಸಂಸ ಬೆಂಬಲ
ಉಡುಪಿ, ಜ.25: ದೇಶದ ಶೋಷಿತ ಜನರ ಸಮಾನತೆಗಾಗಿ ತಮ್ಮ ಜೀವನ ವನ್ನೇ ಸಮರ್ಪಿಸಿದ ವಿಶ್ವಜ್ಞಾನಿಯಾದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಅವಮಾನ ಮಾಡಿದ ಕೇಂದ್ರ ಸರಕಾರದ ನಡೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಇಂತಹ ಮಹತ್ಸಾಧನೆಯನ್ನು ಮಾಡಿದ ನಾರಾಯಣ ಗುರುಗಳಿಗೆ ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೇರೆಡ್ ನಲ್ಲಿ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ ತಿರಸ್ಕಾರ ಮಾಡಿ ಗುರುಗಳಿಗೆ ಕೇಂದ್ರ ಸರಕಾರ ಅವಮಾನ ಮಾಡಿರುವುದು ಖಂಡನೀಯ.
ಜ.26ರಂದು ಜರಗುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಜಾಥಾಕ್ಕೆ ದಸಂಸ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಹಾಗೂ ಸ್ತಬ್ಧಚಿತ್ರ ಸಾಗಿ ಬರುವ ದಾರಿಯಲ್ಲಿ ಹೆಚ್ಚಿನ ಕಾರ್ಯಕರ್ತರು ಗೌರವ ಸೂಚಿಸುವಂತೆ ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ ಮಾಸ್ತರ್, ಅಣ್ಣಪ್ಪ ಕಾರ್ಕಳ, ಶ್ರೀಧರ ಕುಂಜಿಬೆಟ್ಟು, ಗೋಪಾಲಕೃಷ್ಣ ಕುಂದಾಪುರ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ ಬಾಳ್ಕುದ್ರು, ತಾಲೂಕು ಸಂಚಾಲಕ ಶಂಕರ್ ದಾಸ್ ಉಡುಪಿ, ರಾಘವ ಕಾರ್ಕಳ, ದೇವು ಹೆಬ್ರಿ, ವಿಠಲ ಕಾಪು, ಶ್ರೀನಿವಾಸ ವಡ್ಡರ್ಸೆ ಬ್ರಹ್ಮಾವರ, ನಾಗರಾಜ ಕುಂದಾಪುರ, ರಾಘವೇಂದ್ರ ಬೆಳ್ಳೆ, ರಾಜೇಂದ್ರನಾಥ್, ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಎಸ್.ಎಸ್.ಪ್ರಸಾದ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.