ಹಿಜಾಬ್ ವಿವಾದ: ಕೆಪಿಸಿಸಿ ನಿಯೋಗದಿಂದ ಜಿಲ್ಲಾಧಿಕಾರಿ ಭೇಟಿ

ಉಡುಪಿ, ಜ.25: ಹಿಜಾಬ್ ವಿವಾದವು ಸೌಹಾರ್ದಯುತವಾಗಿ ಪರಿಹರಿ ಸುವಂತೆ ಕೆಪಿಸಿಸಿ ನಿಯೋಗವು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕೆಪಿಸಿಸಿ ಕೊರ್ಡಿನೆಟರ್ ಹಬೀಬ್ ಅಲಿ ಖಾದರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಅತ್ರಾಡಿ, ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಕಾಂಗ್ರೆಸ್ ಮುಖಂಡರಾದ ನೂರುದ್ದಿನ್ ಸಾಲ್ಮರ, ಎ.ಸಿ.ಜಯರಾಜ್, ಹಸನ್ ಮಣಿಪುರ, ಅಬ್ದುಲ್ ರೆಹಮನ್, ಹಾರುನ್ ರಶೀದ್ ಮೊದಲಾದವರು ಉಪಸ್ಥಿತರಿದ್ದರು.
Next Story





