ಮಂಗಳೂರು: ಜ.27,28ರಂದು ವಿದ್ಯುತ್ ವ್ಯತ್ಯಯ
ಮಂಗಳೂರು, ಜ. 25: ನಗರದ ಬೈಕಂಪಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಸುರತ್ಕಲ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಜ.27ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಸುರತ್ಕಲ್, ಕಾನ, ಕಟ್ಲ, ತಡಂಬೈಲ್, ಮುಂಚೂರು, 1ರಿಂದ 9ನೇ ಬ್ಲಾಕ್, ಕಾಟಿಪಳ್ಳ, ಕುತ್ತೆತ್ತೂರು, ಚೇಳಾರು, ಮಧ್ಯ, ಮುಕ್ಕ, ಸಸಿಹಿತ್ಲು, ಚೊಕ್ಕಬೆಟ್ಟು, ಕೋಟೆ, ಆದರ್ಶ ನಗರ, ರಾಜೀವ ನಗರ, ಸೂರಿಂಜೆ, ಶಿಬರೂರು, ಬಾಳ, ಮಂಗಳಪೇಟೆ, ಬಿಎಎಸ್‌ಎಫ್, ಎಚ್‌ಪಿಸಿಎಲ್, ಸ್ಟೀಲ್ ಬ್ಯಾರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜ.27ರ ಬೆಳಗ್ಗೆ 10:30ರಿಂದ ಸಂಜೆ 5ರವರೆಗೆ ಬಂದರ್ ಪೊಲೀಸ್ ಠಾಣೆ. ಬಾಂಬೆ ಲಕ್ಕಿ ಹೊಟೇಲ್, ಅಝೀಝುದ್ದೀನ್ ರಸ್ತೆ, ಭಟ್ಕಳ್ ಬಝಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ, ಛೇಂಬರ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜ.27ರ ಬೆಳಗ್ಗೆ 10ರಿಂದ ಸಂಜೆ 5ರವರೆ ಮಂಗಳಾದೇವಿ, ಎಮ್ಮೆಕೆರೆ, ಹೊಗೈಬಝಾರ್, ಸುಭಾಷ್‌ನಗರ, ಶಿವನಗರ, ಮಂಕಿಸ್ಟ್ಯಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜ.27ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಲ್ಲಾಳ್‌ಭಾಗ್, ಎಂಜಿ ರೋಡ್, ಲಾಲ್‌ಭಾಗ್, ಜೈಲ್‌ರೋಡ್, ಸಿ.ಜಿ ಕಾಮತ್ ರೋಡ್, ಬಿಜೈ ಕೆಎಸ್ಸಾರ್ಟಿಸಿ, ಶ್ರೀದೇವಿ ಕಾಲೇಜು ರೋಡ್, ವಿವೇಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜ.28ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಲೇಡಿಗೋಶನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜಿಹೆಚ್‌ಎಸ್ ರೋಡ್, ಪಿ.ಎಂ. ರಾವ್ ರೋಡ್, ಗೌರಿಮಠ ರಸ್ತೆ, ರಾಘವೇಂದ್ರ ಮಠ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.







