ತಲಪಾಡಿ ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್‌ನ ಕಚೇರಿ ಉದ್ಘಾಟನೆ

ಮಂಗಳೂರು, ಜ.25: ತಲಪಾಡಿ ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್‌ನ ನೂತನ ಕಚೇರಿಯು ತಲಪಾಡಿ ಹಳೆಯ ಚೆಕ್ ಪೋಸ್ಟ್ ಬಳಿ ಸೋಮವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಕಷ್ಟಕಾರ್ಪಣ್ಯಗಳನ್ನು ಅರ್ಥ ಮಾಡಿ ಕೊಂಡವರಿಗೆ ಮಾತ್ರ ಸಹಾಯ ಮಾಡುವ ಮನಸ್ಸು ಆಗುತ್ತದೆ. ಹಿರಿಯರ ಅನುಭವ, ಧರ್ಮಗುರುಗಳ ಮಾರ್ಗದರ್ಶನ ಪಡೆದ ಮುನ್ನೆಡರೆ ಯಶಸ್ಸು ಸಾಧ್ಯ, ಗೊತ್ತು ಗುರಿಯಿಲ್ಲದ ಪಯಣದಿಂದ ವೈಫಲ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.ಬೋಳಂಗಡಿ ಹವ್ವಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್ ಕಚೇರಿಯನ್ನು ಉದ್ಘಾಟಿಸಿದರು. ಪಿ.ಎ.ಕಾಲೇಜಿನ ಪ್ರೊ. ಮುಹಮ್ಮದ್ ಮುಬೀನ್ ದಿಕ್ಸೂಚಿ ಭಾಷಣ ಮಾಡಿದರು. ಅಸೋಸಿಯೇಶನ್ ಉಪಾಧ್ಯಕ್ಷ ಇಬ್ರಾಹಿಂ ಟಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಚಿತ್ರ ನಿರ್ಮಾಪಕ ತಮ್ಮಣ್ಣ ಶೆಟ್ಟಿ, ತಲಪಾಡಿ ಅಬ್ರಾರ್ ಮಸೀದಿಯ ಅಧ್ಯಕ್ಷ ಅಬ್ಬಾಸ್ ಜಿ.,ಬಿಲಾಲ್ ಜುಮಾ ಮಸೀದಿಯ ಅಧ್ಯಕ್ಷ ಯಾಕೂಬ್ ತಲಪಾಡಿ, ಮಂಗಳೂರು ತಾಪಂ ಮಾಜಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗರೆ, ಉದ್ಯಮಿ ಮುಹಮ್ಮದ್, ಟಿವೈಎಫ್ ರಿಯಾದ್ ಘಟಕಾಧ್ಯಕ್ಷ ಅಹ್ಮದ್ ಕಬೀರ್, ತಲಪಾಡಿ ಗ್ರಾಪಂ ಸದಸ್ಯ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.
ತಲಪಾಡಿ ಗ್ರಾಪಂ ಮಾಜಿ ಸದಸ್ಯ ಇಬ್ರಾಹಿಂ ತಲಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಹನೀಫ್ ಟಿ.ಎಸ್. ವಂದಿಸಿದರು. ವಿ.ಜೆ. ಶಿವ ಭಟ್ ಕಾರ್ಯಕ್ರಮ ನಿರೂಪಿಸಿದರು.