ವ್ಯಕ್ತಿ ಕಾಣೆ

ಮಂಗಳೂರು, ಜ.25: ನಗರದ ಪದವು ಸಮೀಪದ ಬಿಕರ್ನಕಟ್ಟೆ ಸೌಜನ್ಯ ರಸ್ತೆಯ ನಿವಾಸಿ ಉಮೇಶ್ ನಾಯ್ಕೆ (53) ಜ.21ರಂದು ಅಪರಾಹ್ನ 3 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ವಾಪಸಾಗದೆ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಜೀವನ ನಡೆಸುತ್ತಿದ್ದ ಉಮೇಶ್ ನಾಯಕ್ ಕಳೆದ 5-6 ತಿಂಗಳುಗಳಿಂದ ಅಸೌಖ್ಯದಿಂದ ಮನೆಯಲ್ಲೇ ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು 5.8 ಅಡಿ ಎತ್ತರವಿದ್ದಾರೆ. ಬಲಗೈ ನಡುಬೆರಳು ಸ್ವಲ್ಪ ಓರೆಯಾಗಿದೆ. ಕಂದು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಠಾಣೆ (0824-2220529)ಗೆ ಮಾಹಿತಿ ನೀಡಲು ಪೊಲೀಸರು ಮನವಿ ಮಾಡಿದ್ದಾರೆ.
Next Story





