ಗುರುಪುರ ನಿವಾಸಿ ಸೌದಿ ಅರೇಬಿಯಾದಲ್ಲಿ ನಿಧನ

ಮಂಗಳೂರು, ಜ.25: ಮೂಲತಃ ಬೆಳ್ತಂಗಡಿ ತಾಲೂಕಿನ ಪ್ರಸ್ತುತ ಮಂಗಳೂರು ಗುರುಪುರದಲ್ಲಿ ವಾಸವಾಗಿದ್ದ ಅಬ್ದುಲ್ ಹಮೀದ್ (52) ಶುಕ್ರವಾರ ಸೌದಿ ಅರೇಬಿಯಾದ (ಬೀಷಾ)ದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಅಬ್ದುಲ್ ಹಮೀದ್ ಜ.21ರಂದು ಮಧ್ಯಾಹ್ನ ಹೃದಯಾಘಾತಕ್ಕೀಡಾ ಗಿದ್ದರು. ಸೌದಿ ಅರೇಬಿಯಾದ ಬೀಷಾ ಕಿಂಗ್ ಅಬ್ದುಲ್ಲಾ ಆಸ್ಪತ್ರೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಐಎಸ್‌ಎಫ್ ಕೇರಳ ಮತ್ತು ಕರ್ನಾಟಕ ಸಮಿತಿಯ ಮುಖಂಡರು ಭಾರತೀಯ ರಾಯಬಾರಿ ಕಚೇರಿ ಮೂಲಕ ಅಂತ್ಯಕ್ರಿಯೆಗೆ ಬೇಕಾದ ದಾಖಲೆಪತ್ರಗಳನ್ನು ತರಿಸಿಕೊಂಡು ಜ.24ರಂದು ಅಸರ್ ನಮಾಝ್ ಬಳಿಕ ಬೀಷಾದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





