ಬಂಟ್ವಾಳ ತೌಹೀದ್ ಶಾಲೆಯಲ್ಲಿ ಗಣರಾಜ್ಯೋತ್ಸವ

ಬಂಟ್ವಾಳ: ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಗಣರಾಜ್ಯೋತ್ಸವ ಆಚರಿಸಲಾಯಿತು.
ಬಂಟ್ವಾಳ ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಶಾಫಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು.
ಸಮಾರಂಭದಲ್ಲಿ ಶಿಕ್ಷಕಿ ಶಿಫಾನಾ ಗಣರಾಜ್ಯೋತ್ಸವ ದಿನದ ಮಹತ್ವವನ್ನು ವಿವರಿಸಿದರು. ಶಾಲಾ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಹಾರೂನ್ ರಶೀದ್, ಉಬೈದುಲ್ಲಾ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದ ಸದಸ್ಯರು, ತೌಹೀದ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾ, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಅಸ್ಮಾ ಸ್ವಾಗತಿಸಿದರು. ಮೋಲಿ ವಂದಿಸಿದರು. ಮೀನಾ ನಿರೂಪಿಸಿದರು.
Next Story