ದಲಿತರಿಂದ ‘ಸಂವಿಧಾನ ಉಳಿಸಿ ದೇಶ ರಕ್ಷಿಸಿ’ ಜನಜಾಗೃತಿ ಕಾರ್ಯಕ್ರವು
ಮಲ್ಪೆ, ಜ.26: ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕದಿಂದ 73ನೇ ಗಣರಾಜ್ಯೋತ್ಸವ ಪ್ರಯಕ್ತ ಸಂವಿಧಾನ ಉಳಿಸಿ-ದೇಶ ರಕ್ಷಿಸಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬುಧವಾರ ಮಲ್ಪೆಸಮುದ್ರ ಕಡಲ ತೀರದ ಗಾಂಧಿ ಪ್ರತಿಮೆ ಬಳಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಪ್ರಸ್ತುತ ಈ ದೇಶ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿ ದ್ದೇವೆ. ಅಂಬೇಡ್ಕರ್ ಕನಸು ಕಂಡ ಸಮಾಜವಾದಿ ಸಂವಿಧಾನವನ್ನು ಸಾಕಾರ ಮಾಡಲು ಮತ್ತೊಂದು ನೈಜ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸದೆ ಬೇರೇ ದಾರಿಯಿಲ್ಲ. ದೇಶದಲ್ಲಿ ರಾಜಕೀಯವಾಗಿ ನಾವು ಸಮಾನತೆಯನ್ನು ಪಡೆದಿರು ತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯವೆಂಬ ತತ್ವವನ್ನು ನಿರಾಕರಿಸಲಾಗಿದೆ ಎಂದು ದೂರಿದರು.
ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ ದೇಶದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ರಕ್ಷಣೆಗೆ ಸಂವಿಧಾನದ ಕೊಡುಗೆ ಅಪಾರ. ಅತ್ಯುತ್ತಮ ಸಂವಿಧಾನವನ್ನು ಈ ದೇಶ ಹೊಂದಿದ್ದರೂ ಇಲ್ಲಿನ ದಲಿತರ ಪರಿಸ್ಥಿತಿ ಶೋಚನೀಯ. ಹಾಗಾಗಿ ಸಂವಿಧಾನದ ರಕ್ಷಣೆ ಯುವಜನಾಂದ ಹೊಣೆ ಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಹಿರಿಯ ಹೋರಾಟಗಾರ ದಯಕರ ಮಲ್ಪೆ, ರಾಜೇಶ್ ಕೆಮ್ಮಣ್ಣು, ಸಂತೋಷ್ ಕಪ್ಪೆಟ್ಟು ಮಾತನಾಡಿದರು. ದಯಾನಂದ ಕಪೆಟ್ಟು, ಕೃಷ್ಣ ಶ್ರೀಯಾನ್, ದಿನೇಶ್ ಜವನೆರ ಕಟ್ಟೆ, ಗುಣವಂತ ತೊಟ್ಟಂ, ಅನಿಲ್ ಕದ್ಕೆ, ರಾಮೋಜಿ ಅಮೀನ್, ಅರುಣ್ ಸಾಲ್ಯಾನ್, ಪ್ರಶಾಂತ್ ಬಿ.ಎನ್., ಪ್ರಸಾದ್ ನೆರ್ಗಿ, ಮಹೇಶ್ ಚೆಂಡ್ಕಳ, ಸತೀಶ್ ತೊಟ್ಟಂ, ಪ್ರಕಾಶ್ ಶ್ರೀರಕ್ಷ ಮೊದಲಾದವರು ಉಪಸ್ಥಿತರಿದ್ದರು. ಸುಶೀಲ್ ಕುಮಾರ್ ಕೊಡವೂರು ಸ್ವಾಗತಿಸಿದರು. ಮಂಜುನಾಥ ಕಪ್ಪೆಟ್ಟು ವಂದಿಸಿದರು.