ಗಣ್ಯರಾಜ್ಯೋತ್ಸವದ ಅಂಗವಾಗಿ ಕಿನ್ಯಾ ಎಸ್ಸೆಸ್ಸೆಫ್‌ನಿಂದ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ

ಕಿನ್ಯಾ, ಜ.26: ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವತಿಯಿಂದ ಪುಸ್ತಕ ಹಸ್ತಾಂತರ ಕಾರ್ಯಕ್ರಮವು ಕಿನ್ಯಾ ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವದ ಪ್ರತಿಭೆ ಹಾಫಿಝ್ ಕೆ.ಎಂ. ಸಈದ್ ಮೀಂಪ್ರಿ ಮಾತನಾಡಿದರು. ಸೆಕ್ಟರ್ ಅಧ್ಯಕ್ಷ ನೌಫಲ್ ಅಹ್ಸನಿ ಪುಸ್ತಕ ಓದುವುದರ ಮಹತ್ವದ ಕುರಿತು ವಿಷಯ ಮಂಡಿಸಿದರು. ಈ ಸಂದರ್ಭ ಎಸ್ಸೆಸ್ಸೆಫ್ ಆಯೋಜಿಸಿದ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದ ಪಿಡಿಒ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‌ನ ಸದಸ್ಯರುಗಳಾದ ಸೈಯದ್ ತ್ವಾಹಾ, ಫಾರೂಕ್ ಕಿನ್ಯಾ, ಫಯಾಝ್ ಕಿನ್ಯಾ, ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ, ಕೋಶಾಧಿಕಾರಿ ಹುಸೈನಾರ್ ಹಾಗೂ ಸೆಕ್ಟರ್ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Next Story