ರೆಮೋನಾ ಬಾಲಪ್ರತಿಭೆಗಳಿಗೆ ಸ್ಫೂರ್ತಿ: ವಿನ್ಸೆಂಟ್ ಮೊಂತೆರೋ

ಮಂಗಳೂರು, ಜ. 26; ಯುವಪ್ರತಿಭೆಗಳಿಗೆ ಪಾದುವ ವಿದ್ಯಾಸಂಸ್ಥೆಯ ವೇದಿಕೆ ಸದಾ ಮುಕ್ತವಾಗಿದೆ. ವಿದ್ಯಾರ್ಥಿ ಪ್ರತಿಭೆಗಳು ಈ ಅವಕಾಶವನ್ನು ಏಣಿಯಾಗಿ ಬಳಸಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಯಬೇಕು. ಇಂತಹ ಪ್ರತಿಭೆಗಳಿಗೆ ರೆಮೊನಾ ಇವಿಟಾ ಪಿರೇರಾ ಮಾದರಿಯಾಗಲಿ ಎಂದು ಪಾದುವ ವಿದ್ಯಾಸಂಸ್ಥೆಯ ಸಂಚಾಲಕ ಧರ್ಮಗುರು ವಿನ್ಸೆಂಟ್ ಮೊಂತೆರೋ ಹೇಳಿದ್ದಾರೆ.
ಪಾದುವ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪಾದುವ ಪದವಿಪೂರ್ವ ಕಾಲೇಜಿನ ಪ್ರಥಮ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ, ಪ್ರಧಾನ ಮಂತ್ರಿಗಳ ಬಾಲಪ್ರತಿಭಾ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ರೆಮೋನಾ ಇವಿಟಾ ಪಿರೇರಾ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿ ಮಾತನಾಡಿದರು.
ಸಮಾರಂಭದಲ್ಲಿ ರೆಮೋನಾ ಅವರ ಸಾಧನೆಗೆ ಬೆನ್ನುಲೆಬಾಗಿ ನಿಂತ ಅವರ ತಾಯಿ ಗ್ಲಾಡಿಸ್ ಪಿರೇರಾ, ಅತಿಥಿ ಗಳಾಗಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಂತೋಷ್ ಪಾಯಿಸ್, ಪಾದುವ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜನ್ ,ಪ್ರೌಢಶಾಲಾ ಮುಖ್ಯೋಪದಾಯ ಫ್ರಾನ್ಸಿಸ್ ಡಿ ಕುನ್ಹಾ, ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯಿನಿ ಮೊಲಿಡಿ ಸೋಜಾ ಉಪಸ್ಥಿತರಿದ್ದರು.
ಪಾದುವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಗ್ಲಾಡಿಸ್ ಅಲೋಶಿಯಸ್ ಸನ್ಮಾನ ಪತ್ರ ವಾಚಿಸಿ, ಧನ್ಯವಾದ ಸಲ್ಲಿಸಿದರು. ಪ್ರೌಢಶಾಲಾ ಶಿಕ್ಷಕ ಗ್ಲೆನ್ ಲೋಬೋ ಕಾರ್ಯಕ್ರಮ ನಿರ್ವಹಿಸಿದರು.