ಸೈಬರ್ ದಾಳಿ ಪ್ರಕರಣದ ತನಿಖೆಗೆ ಕೆನಡಾ ಸರಕಾರದ ನಿರ್ಧಾರ

ಸಾಂದರ್ಭಿಕ ಚಿತ್ರ
ಒಟ್ಟಾವ, ಜ.26: ಕೆನಡಾದ ಜಾಗತಿಕ ವ್ಯವಹಾರ ಇಲಾಖೆಯ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಕಳೆದ ವಾರ ನಡೆದ ಸೈಬರ್ ದಾಳಿ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಸರಕಾರ ಮಂಗಳವಾರ ಹೇಳಿದೆ.
ಸೈಬರ್ ದಾಳಿಯ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಅಡ್ಡಿಯಾಗಿದೆ. ಆದರೆ ಸೀಮಿತ ಸಂಖ್ಯೆಯ ಇಂಟರ್ನೆಟ್ ಆಧರಿತ ಸೇವೆಗೆ ತೊಡಕಾಗಿದೆ ಎಂದು ಸರಕಾರದ ಖಜಾನೆ ಇಲಾಖೆ ಮಂಗಳವಾರ ಹೇಳಿದೆ ಆದರೆ ದಾಳಿಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಉಕ್ರೇನ್ನ ಮೇಲೆ ರಶ್ಯಾದ ಸಂಭಾವ್ಯ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯಾ ಬೆಂಬಲಿತ ಹ್ಯಾಕರ್ ಗಳು ಸೈಬರ್ ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ರಶ್ಯಾದ ನಡೆಯನ್ನು ವಿರೋಧಿಸುತ್ತಿರುವ ನೇಟೊ ಒಕ್ಕೂಟದಲ್ಲಿ ಕೆನಡಾವೂ ಸೇರಿದೆ.
Next Story





