ಎಸ್ಡಿಪಿಐ ಮಡಂತ್ಯಾರ್ ಗ್ರಾಮ ಸಮಿತಿ ವತಿಯಿಂದ ಗಣರಾಜ್ಯೋತ್ಸವ

ಪುಂಜಾಲಕಟ್ಟೆ: 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಎಸ್ಡಿಪಿಐ ಮಡಂತ್ಯಾರ್ ಗ್ರಾಮ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಪುಂಜಾಲಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.
ಎಸ್ಡಿಪಿಐ ಮಡಂತ್ಯಾರ್ ಗ್ರಾಮ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ದ್ವಜಾರೋಹಣಗೈದರು. ಎಸ್ಡಿಪಿಐ ಕುವೆಟ್ಟು ಬ್ಲಾಕ್ ಅಧ್ಯಕ್ಷ ಅಶ್ಫಾಕ್ ಪುಂಜಾಲಕಟ್ಟೆ ಸಂದೇಶ ಭಾಷಣ ಮಾಡಿದರು. ಎಸ್ಡಿಪಿಐ ಮಡಂತ್ಯಾರ್ ಗ್ರಾಮ ಸಮಿತಿ ಉಪಾಧ್ಯಕ್ಷ ಸಿರಾಜ್, ಪಿ.ಎಫ್.ಐ ಮಡಂತ್ಯಾರ್ ಡಿವಿಷನ್ ಕಾರ್ಯದರ್ಶಿ ನೌಶಾದ್, ಸ್ಥಳೀಯರಾದ ಉಮರ್ ಎಂಆರ್ ಎಸ್ ಉಪಸ್ಥಿತರಿದ್ದರು.
ಎಸ್ಡಿಪಿಐ ಮಡಂತ್ಯಾರ್ ಗ್ರಾಮ ಸಮಿತಿ ಜೊತೆ ಕಾರ್ಯದರ್ಶಿ ರಿಯಾಝ್ ಪಣಕಜೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
Next Story