ಮೈಸೂರು: ಆರ್ಥಿಕ ಸಂಕಷ್ಟಕ್ಕೆ ದಂಪತಿ ಆತ್ಮಹತ್ಯೆ

ಭವ್ಯ ಸಂತೋಷ್
ಮೈಸೂರು: ಆರ್ಥಿಕ ಸಂಕಷ್ಟಕ್ಕೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಉದಯಗಿರಿ ಬಳಿಯ ಸಾತಗಳ್ಳಿ ಲೇಔಟ್ ನಿವಾಸಿ ಸಂತೋಷ್ (26) ಮತ್ತು ಆತನ ಪತ್ನಿ ಭವ್ಯ (22), ಮೃತ ದುರ್ಧೈವಿಗಳು ಎಂದು ಗುರುತಿಸಲಾಗಿದೆ.
ಸಂತೋಷ್ ವ್ಯಾಪಾರ ಮಾಡುತ್ತಿದ್ದು, ಕೆಲವು ದಿನಗಳಿಂದ ಆತ ಆರ್ಥಿಕ ನಷ್ಟ ಅನುಭವಿಸಿದ್ದ. ಇದರಿಂದ ವಿಪರೀತ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ದಂಪತಿ ಸಾಲಕ್ಕೆ ಹೆದರಿ ಊಟದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





