Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅತ್ಯಂತ ಕಠಿಣ ಮತ್ತು ಅನಿಶ್ಚಿತ...

ಅತ್ಯಂತ ಕಠಿಣ ಮತ್ತು ಅನಿಶ್ಚಿತ ಸಮಯದಲ್ಲಿ ಭಾರತದ ಆರು ಪ್ರಮುಖ ಆದ್ಯತೆಗಳು

ಭರತ್ ಡೋಗ್ರಾಭರತ್ ಡೋಗ್ರಾ27 Jan 2022 11:00 AM IST
share
ಅತ್ಯಂತ ಕಠಿಣ ಮತ್ತು  ಅನಿಶ್ಚಿತ ಸಮಯದಲ್ಲಿ  ಭಾರತದ ಆರು ಪ್ರಮುಖ ಆದ್ಯತೆಗಳು

ಈ ದಿನಗಳು ಹೆಚ್ಚಿನವರಿಗೆ ಅತ್ಯಂತ ಕಠಿಣ ಮತ್ತು ಸಂಪೂರ್ಣ ಅನಿಶ್ಚಿತತೆಯ ದಿನಗಳು. ಇಂದು ಭಾರತ ಎದುರಿಸುತ್ತಿರುವ ಮಹತ್ವದ ಸಮಸ್ಯೆಗಳು ಹಲವಾರಿವೆ. ಆದರೆ ಇಲ್ಲಿ ಅತ್ಯಂತ ತುರ್ತಿನ ಆರು ಸಮಸ್ಯೆಗಳ ಮೇಲೆ ಗಮನ ಹರಿಸಲಾಗಿದೆ.

ಮೊದಲಿಗೆ ನಾವು ಗಮನ ಹರಿಸಬೇಕಾಗಿರುವುದು ಬಡತನದಲ್ಲಿ ಜೀವಿಸುವ ಹಾಗೂ ಮೂಲಭೂತ ಅವಶ್ಯಕತೆಗಳು ನಿರಾಕರಿಸಲ್ಪಟ್ಟಿರುವ ಜನರತ್ತ. ಇದರಲ್ಲಿ ಇತ್ತೀಚಿನ ದಿನಗಳಲ್ಲಿ ಆದಾಯ ಮತ್ತು ಜೀವನೋಪಾಯದಲ್ಲಿ ಗಮನಾರ್ಹ ಖೋತಾ ಅನುಭವಿಸಿರುವ ಜನರೂ ಸೇರಿದ್ದಾರೆ. ಭಾರತದಲ್ಲಿ ಇಂತಹವರ ಹಾಗೂ ಇಂತಹವರನ್ನು ಒಳಗೊಂಡ ಮನೆಗಳ ಸಂಖ್ಯೆ ಈಗ ಗರಿಷ್ಠ ಮಟ್ಟದಲ್ಲಿದೆ. ಈ ಸಂಖ್ಯೆಯು ಇತ್ತೀಚಿನ ಕೆಲವು ಸಮೀಕ್ಷೆಗಳು ಲೆಕ್ಕಹಾಕಿರುವುದಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಹಲವಾರು ವರ್ಷಗಳಿಂದ ಅಸಮಾನತೆ ವೇಗವಾಗಿ ಬೆಳೆಯುತ್ತಿದ್ದು, ಇದಕ್ಕೆ ಹಲವು ಕಾರಣಗಳಿವೆ. ಅವುಗಳೆಂದರೆ ನಗದು ಅಮಾನ್ಯೀಕರಣ ಮುಂತಾದ ಸರಕಾರದ ಬೃಹತ್ ನೀತಿ ವೈಫಲ್ಯಗಳು, ಜಿಎಸ್‌ಟಿ ಸೇರಿದಂತೆ ದೋಷಪೂರಿತ ಆರ್ಥಿಕ ನಿರ್ಧಾರಗಳು ಮತ್ತು ಪರೋಕ್ಷ ತೆರಿಗೆಗಳ ಮೇಲಿನ ಭಾರೀ ಅವಲಂಬನೆ, ಅತ್ಯಂತ ದೋಷಪೂರಿತ ಅಭಿವೃದ್ಧಿ ಮಾದರಿ, ಹವಾಮಾನ ಬದಲಾವಣೆ ಮತ್ತು ವಿಪತ್ತುಗಳು, ಸಾಂಕ್ರಾಮಿಕ ಮತ್ತು ಅತ್ಯಂತ ದೋಷಪೂರಿತ ಸಾಂಕ್ರಾಮಿಕ ನಿರ್ವಹಣೆ. ಇವೆಲ್ಲವುಗಳು ಮೇಳೈಸಿಕೊಂಡು ಬಡತನ, ನಿರಾಕರಣೆ ಮತ್ತು ಜೀವನೋಪಾಯಗಳ ನಷ್ಟ ಅಥವಾ ಗಣನೀಯ ಕಡಿತದ ಪರಿಣಾಮವಾಗಿ ಉದ್ಭವಿಸಿರುವ ಸಂಕಟ ವ್ಯಾಪಕವಾಗಿ ಪಸರಿಸಿದೆ. ಈ ಸಂಕಟವನ್ನು ವಿವಿಧ ವಿಧಾನಗಳ ಮೂಲಕ ಕಡಿಮೆಗೊಳಿಸುವುದು ಸರಕಾರದ ಇನ್ನು ಮುಂದಿನ ಪ್ರಧಾನ ನೀತಿಯಾಗಬೇಕು.

ಎರಡನೆಯದಾಗಿ, ಅಂತರ್‌ಧರ್ಮೀಯ ಸೌಹಾರ್ದವನ್ನು ಹಾಳುಗೆಡವಲು ಹೊರಟಿರುವ ಕೆಲವೊಂದು ಶಕ್ತಿಗಳು ದುರದೃಷ್ಟವಶಾತ್ ಇಂದು ಹೆಚ್ಚು ಸಕ್ರಿಯವಾಗಿವೆ ಹಾಗೂ ತಮ್ಮ ಸಿದ್ಧಾಂತಗಳನ್ನು ಹರಡಲು ಈಗ ಹೆಚ್ಚು ಅವಕಾಶವಿದೆ ಎಂಬುದಾಗಿ ಭಾವಿಸಿವೆ. ಹಾಗಾಗಿ, ಭಾರತೀಯ ಸಮಾಜದ ಏಕತೆ ಮತ್ತು ಸೌಹಾರ್ದವನ್ನು ರಕ್ಷಿಸುವ ನಿಟ್ಟಿನಲ್ಲಿ ಸಮಾಜವು ಹೆಚ್ಚು ಜಾಗರೂಕವಾಗಿರಬೇಕು. ನಮ್ಮನ್ನು ವಿಭಜಿಸಲು ಮತ್ತು ದುರ್ಬಲಗೊಳಿಸಲು ಈವರೆಗೆ ನಡೆಸಿಕೊಂಡು ಬರಲಾಗಿರುವ ಎಲ್ಲ ಪ್ರಯತ್ನಗಳನ್ನು ನಮಗೆ ವಿಫಲಗೊಳಿಸಲು ಸಾಧ್ಯವಾಗಿರುವುದು ಭಾರತದ ಕಲ್ಪನೆಯಿಂದಾಗಿ. ವೈವಿಧ್ಯತೆಯ ನಡುವೆ ಏಕತೆ ಎನ್ನುವುದು ಭಾರತದ ಕಲ್ಪನೆಯಾಗಿದೆ.

ನಮ್ಮ ವೈವಿಧ್ಯತೆಗಳನ್ನು ನಾವು ಗೌರವಿಸಬೇಕು ಮತ್ತು ಆಚರಿಸಬೇಕು. ಇದು ವಾಸ್ತವಿಕವಾಗಿ ನಮ್ಮ ಸಂಸ್ಕೃತಿಯನ್ನು ಬೆಳಸುತ್ತದೆ ಹಾಗೂ ಒಂದು ದೇಶವಾಗಿ ನಾವೆಲ್ಲ ಒಂದು ಮತ್ತು ಎಲ್ಲ ಸಮುದಾಯಗಳು ಪರಸ್ಪರರಿಗೆ ನೆರವಾಗಬೇಕು ಹಾಗೂ ಹಾನಿ ಮಾಡಬಾರದು ಎನ್ನುವುದನ್ನು ನಾವು ಸ್ಮರಿಸುವಂತೆ ಮಾಡುತ್ತದೆ. ಸಾಂಸ್ಕೃತಿಕ ವೈವಿಧ್ಯತೆಯ ನಡುವೆ ಏಕತೆಯ ಪರವಾಗಿ ಸಮಾಜ ನಿಂತರೆ, ತಮಗೆ ದ್ವೇಷವನ್ನು ಹರಡಲು ಈಗ ಹೆಚ್ಚಿನ ಅಧಿಕಾರವಿದೆ ಎಂದು ಭಾವಿಸುವವರು ಮಾಡಿರುವ ಹಾನಿಯನ್ನು ಈಗಲೂ ಸರಿಪಡಿಸಬಹುದಾಗಿದೆ.

ಮೂರನೆಯದಾಗಿ, ಆಹಾರ ಮತ್ತು ಕೃಷಿ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸುವ ಕೆಲಸ ಈಗ ನಡೆಯುತ್ತಿದೆ. ಇದರಿಂದಾಗಿ ಆಗುವ ಸರಿಪಡಿಸಲಾಗದಷ್ಟು ಹಾನಿಯಿಂದ ಈ ವಲಯವನ್ನು ರಕ್ಷಿಸಬೇಕಾಗಿದೆ. ಸದ್ಯಕ್ಕೆ ಈ ವಲಯ ಎದುರಿಸುತ್ತಿರುವ ಅತ್ಯಂತ ದೊಡ್ಡ ಬೆದರಿಕೆಯೆಂದರೆ, ಕುಲಾಂತರಿ (ಜಿಎಮ್) ಆಹಾರಗಳಿಗೆ ಅವಕಾಶ ನೀಡುವ ಅಥವಾ ಕುಲಾಂತರಿ ಆಹಾರಗಳ ಮೇಲೆ ಈಗ ಇರುವ ನಿರ್ಬಂಧಗಳನ್ನು ದುರ್ಬಲಗೊಳಿಸುವ ಸಾಧ್ಯತೆ. ಇತ್ತೀಚೆಗೆ ಈ ಭೀತಿಯನ್ನು ವ್ಯಕ್ತಪಡಿಸಿರುವುದು ಹಲವಾರು ಪರಿಸರ, ಆರೋಗ್ಯ ಮತ್ತು ಕೃಷಿ ಹೋರಾಟಗಾರರು ಮಾತ್ರವಲ್ಲ, ಸಂಘ ಪರಿವಾರದ ಪ್ರಮುಖ ಭಾಗವಾಗಿರುವ ಸ್ವದೇಶಿ ಜಾಗರಣ್ ಮಂಚ್ ಕೂಡ ಈ ಭಿತಿಯನ್ನು ವ್ಯಕ್ತಪಡಿಸಿದೆ.

ಆಹಾರದ ಸುರಕ್ಷತೆ ಮತ್ತು ಗುಣಮಟ್ಟಗಳನ್ನು ಕಾಪಾಡುವುದಕ್ಕಾಗಿ ಉನ್ನತ ಅಧಿಕಾರ ಸ್ಥಾನಗಳಿಗೆ ನೇಮಕಗೊಂಡವರ ಪೈಕಿ ಕೆಲವರು, ಆಹಾರ ಸುರಕ್ಷತೆ ಮತ್ತು ನಮ್ಮ ದೇಶದ ಭದ್ರತೆಯನ್ನು ಹಾನಿಗೊಳಿಸಲು ಪ್ರಯತ್ನಿಸುತ್ತಿರುವವರ ಸ್ನೇಹಿತರಂತೆ ವರ್ತಿಸುತ್ತಿದ್ದಾರೆ. ಕುಲಾಂತರಿ ಆಹಾರಗಳ ಮೇಲೆ ಭಾರತದಲ್ಲಿ ವಿಧಿಸಲಾಗಿರುವ ನಿಷೇಧವು ಹೋಗಬೇಕೆಂದು ಹಲವು ಅತ್ಯಂತ ಪ್ರಭಾವಶಾಲಿ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಅಂತರ್‌ರಾಷ್ಟ್ರೀಯ ಶಕ್ತಿಗಳು ಕಾಯುತ್ತಿವೆ. ಇದು ಸಂಭವಿಸಿದರೆ ಸುರಕ್ಷಿತ, ಆರೋಗ್ಯಯುತ ಆಹಾರವನ್ನು ಉತ್ಪಾದಿಸುವ ಮತ್ತು ಪೂರೈಸುವ ಅತ್ಯಂತ ಮಹತ್ವದ ಕೃಷಿ ದೇಶದ ಭವಿಷ್ಯವನ್ನು ನಾಶಪಡಿಸಬಹುದು ಎನ್ನುವುದು ಈ ಬಹುರಾಷ್ಟ್ರೀಯ ಕಂಪೆನಿಗಳ ತಂತ್ರಗಾರಿಕೆ. ಸರಕಾರದ ಅತ್ಯುನ್ನತ ಮಟ್ಟವು ವಿವೇಕವನ್ನು ತೋರ್ಪಡಿಸುತ್ತದೆ ಹಾಗೂ ಕುಲಾಂತರಿ ಆಹಾರಗಳ ಮೇಲಿನ ನಿಷೇಧವನ್ನು ತೆರವುಗೊಳಿಸುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂಬುದಾಗಿ ನಾವು ಆಶಿಸೋಣ. ಬದಲಿಗೆ, ಕುಲಾಂತರಿ ಆಹಾರದ ಮೇಲಿನ ನಿಷೇಧವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ.

ಅದೇ ವೇಳೆ, ದೇಶದ ಆರೋಗ್ಯ ಕ್ಷೇತ್ರದ ನಿಯಂತ್ರಣವನ್ನು ಅನುಚಿತ ಮಾರ್ಗಗಳ ಮೂಲಕ, ಅದರಲ್ಲೂ ಮುಖ್ಯವಾಗಿ ಲಸಿಕೆ ಮಾರ್ಗದ ಮೂಲಕ ಪಡೆಯಲು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಬೃಹತ್ ಔಷಧ ತಯಾರಿಕಾ ಕಂಪೆನಿಗಳು ನಡೆಸುತ್ತಿರುವ ಪ್ರಯತ್ನಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಅವ್ಯವಸ್ಥೆ ತರಲು ಹಾಗೂ ಅದರಲ್ಲಿ ತಮ್ಮ ನಿಯಂತ್ರಣವನ್ನು ಹೆಚ್ಚಿಸಲು ಅತ್ಯಂತ ಪ್ರಭಾವಿ ಅಂತರ್‌ರಾಷ್ಟ್ರೀಯ ಶಕ್ತಿಗಳ ನೆರವಿನೊಂದಿಗೆ ಅವುಗಳು ಪ್ರಯತ್ನಗಳನ್ನು ನಡೆಸುತ್ತಿವೆ. ಅದಕ್ಕಾಗಿ ಅವುಗಳು ಸಾಂಕ್ರಾಮಿಕವನ್ನು ಬಳಸಲು ಅವಕಾಶ ನೀಡಬಾರದು. ಈ ಪ್ರಯತ್ನಗಳಲ್ಲಿ ಅವುಗಳು ಯಶಸ್ವಿಯಾದರೆ, ಅಭಿವೃದ್ಧಿಶೀಲ ದೇಶಗಳು ಆರೋಗ್ಯ ಕ್ಷೇತ್ರಕ್ಕಾಗಿ ಮೀಸಲಿಡುವ ನಿಧಿಯ ಬಹುತೇಕ ಭಾಗ ಅವುಗಳ ತಿಜೋರಿ ಸೇರುತ್ತವೆ. ಅದೂ ಅಲ್ಲದೆ, ಅಭಿವೃದ್ಧಿಶೀಲ ದೇಶಗಳ ಆರೋಗ್ಯ ಆದ್ಯತೆಗಳು ಬದಲಾಗುತ್ತವೆ. ಯಾಕೆಂದರೆ ಈ ದೇಶಗಳ ಆರೋಗ್ಯ ಕ್ಷೇತ್ರವು ಅವುಗಳ ನಿಯಂತ್ರಣದಲ್ಲಿರುತ್ತದೆ.

ಇದನ್ನು ನಿಭಾಯಿಸುವ ವಿಧಾನವೆಂದರೆ, ಸಾಂಕ್ರಾಮಿಕಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಹಾಗೂ ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪುರಾವೆ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರಭಾವಶಾಲಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗದಿರುವುದು. ಅದರಲ್ಲೂ ಮುಖ್ಯವಾಗಿ, ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಪಕ್ಷಪಾತರಹಿತವಾಗಿ ವಿಶ್ಲೇಷಣೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಸಾರ್ವಜನಿಕ ಆರೋಗ್ಯದಂತಹ ಅತ್ಯಂತ ಮಹತ್ವದ ವಿಷಯಗಳಲ್ಲಿ ನಡಯುವ ಚರ್ಚೆಯು ಪ್ರಜಾಸತ್ತಾತ್ಮಕವಾಗಿರಬೇಕು. ಕೋವಿಡ್ ಲಸಿಕೆಗಳು, ಅದರಲ್ಲೂ ಮುಖ್ಯವಾಗಿ ಮಕ್ಕಳು ಮತ್ತು ಹದಿಹರೆಯದವರಿಗೆ ಕೊಡುವ ಲಸಿಕೆಗಳು ಮತ್ತು ಅವುಗಳ ಸುರಕ್ಷತೆಗೆ ಸಂಬಂಧಿಸಿ ಹಲವು ದೇಶಗಳಲ್ಲಿ ಸಾವಿರಾರು ಹಿರಿಯ ವಿಜ್ಞಾನಿಗಳು ಮತ್ತು ವೈದ್ಯರು ಎಚ್ಚರಿಕೆಯ ಕರೆಗಂಟೆಗಳನ್ನು ಮೊಳಗಿಸಿದ್ದಾರೆ.

ಈಗ ಭಾರತದಲ್ಲಿ ಭಿನ್ನಾಭಿಪ್ರಾಯವನ್ನು ಸಹಿಸುವ ಗುಣ ತೀವ್ರವಾಗಿ ಕುಸಿಯುತ್ತಿರುವ ಬಗ್ಗೆ ಭಾರೀ ಕಳವಳ ವ್ಯಕ್ತವಾಗುತ್ತಿದೆ. ಇದು ಕೆಲವು ಅತ್ಯಂತ ಗೌರವಾನ್ವಿತ ಮತ್ತು ಧೀಮಂತ ವ್ಯಕ್ತಿಗಳು ಸೇರಿದಂತೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಕ್ಕಾಗಿ ದೇಶದಲ್ಲಿ ಜೈಲು ಪಾಲಾಗಿರುವ ವ್ಯಕ್ತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಧೀಮಂತ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದ ಫಾದರ್ ಸ್ಟಾನ್ ಸ್ವಾಮಿ ಜೈಲಿಗೆ ಹೋದ ಬಳಿಕ ಪ್ರಾಣವನ್ನೇ ಕಳೆದುಕೊಂಡರು. ಅವರು ಸಮಾಜದ ದುರ್ಬಲ ವರ್ಗಗಳು, ಅದರಲ್ಲೂ ಮುಖ್ಯವಾಗಿ ಬುಡಕಟ್ಟು ಪಂಗಡಗಳ ಹಿತಾಸಕ್ತಿ ರಕ್ಷಣೆಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರ ಸಾವು ದೇಶದ ಆತ್ಮಸಾಕ್ಷಿಯನ್ನು ಕದಡಿತು ಹಾಗೂ ವಿಶ್ವಾದ್ಯಂತದಿಂದ ಖಂಡನೆ ವ್ಯಕ್ತವಾಯಿತು. ಜೈಲಿನಲ್ಲಿ ಕೊಳೆಯುತ್ತಿರುವ ಇಂತಹದೇ ಧೀಮಂತ ವ್ಯಕ್ತಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳ ವರದಿಗಳು ತಿಳಿಸಿವೆ. ಬಡತನದ ಹಿನ್ನೆಲೆಯಿಂದ ಬಂದ ಹಲವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವುದಕ್ಕಾಗಿ ಹಾಗೂ ಸಾಮಾಜಿಕ ಪ್ರತಿಭಟನೆಗಳಲ್ಲಿ ಭಾಗವಿಸಿರುವುದಕ್ಕಾಗಿ ಈಗ ಜೈಲಿನಲ್ಲಿದ್ದಾರೆ. ಹಾಗಾಗಿ, ಇಂತಹ ಪ್ರಕರಣಗಳ ರಾಷ್ಟ್ರವ್ಯಾಪಿ ಸಮೀಕ್ಷೆಯೊಂದು ನಡೆಯಬೇಕಾಗಿದೆ ಹಾಗೂ ಅದರ ಆಧಾರದಲ್ಲಿ, ಅನ್ಯಾಯವಾಗಿ ಜೈಲು ಪಾಲಾಗಿರುವ ಎಲ್ಲ ಸಾಮಾಜಿಕ ಹೋರಾಟಗಾರರನ್ನು ಬಿಡುಗಡೆಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ.

ಕೊನೆಯಲ್ಲಿ ಅತ್ಯಂತ ಮಹತ್ವದ ವಿಷಯವೊಂದಕ್ಕೆ ಬರುತ್ತಿದ್ದೇನೆ. ಚುನಾವಣೆಗಳು ಮತ್ತು ಚುನಾವಣಾ ಪ್ರಕ್ರಿಯೆಗಳ ಮೂಲಕ ಸರಕಾರಗಳನ್ನು ಬದಲಿಸುವ ಜನರ ಸಾಮರ್ಥ್ಯವಾಗಿರುವ ಪ್ರಜಾಪ್ರಭುತ್ವದ ಅಡಿಪಾಯವನ್ನು ರಕ್ಷಿಸಬೇಕು. ಪ್ರಜಾಪ್ರಭುತ್ವದ ಈ ಅತ್ಯಂತ ಪ್ರಮುಖ ಘಟಕವನ್ನು ಹಲವಾರು ವಿಧಗಳಲ್ಲಿ ದುರ್ಬಲಗೊಳಿಸಬಹುದಾಗಿದೆ. ಉದಾಹರಣೆಗೆ; ಸರಕಾರ ಮತ್ತು ಬಿಲಿಯಾಧೀಶರ ನಡುವಿನ ಗಾಢ ಬಾಂಧವ್ಯವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಸರಕಾರದಿಂದ ಪಡೆದ ಉಪಕಾರಗಳಿಗೆ ಪ್ರತಿಯಾಗಿ ಬಿಲಿಯಾಧೀಶರ ಬೃಹತ್ ಉದ್ಯಮಗಳು ಆಡಳಿತಾರೂಢ ಪಕ್ಷದ ಬೊಕ್ಕಸಕ್ಕೆ ಅಗಾಧ ಹಣವನ್ನು ಅಪಾರದರ್ಶಕ ಪ್ರಕ್ರಿಯೆಗಳ (ಉದಾಹರಣೆಗೆ; ಚುನಾವಣಾ ಬಾಂಡ್ ವ್ಯವಸ್ಥೆ) ಮೂಲಕ ದೇಣಿಗೆ ನೀಡಬಹುದಾಗಿದೆ ಹಾಗೂ ಇದಕ್ಕೆ ಕಾನೂನು ಮಾನ್ಯತೆಯನ್ನೂ ನೀಡಬಹುದಾಗಿದೆ. ಹಾಗಾಗಿ, ಅಭೂತಪೂರ್ವ ಮಟ್ಟದಲ್ಲಿ ಬೃಹತ್ ಪ್ರಮಾಣದ ಹಣ ಸ್ವೇಚ್ಛಾಚಾರದ ಮತ್ತು ಅಪಾರದರ್ಶಕ ಬಳಕೆಗೆ ಒಂದು ರಾಜಕೀಯ ಪಕ್ಷಕ್ಕೆ ಲಭಿಸುತ್ತದೆ. ಇದು ಕೇವಲ ಚುನಾವಣಾ ವೆಚ್ಚಗಳಿಗೆ ಮಾತ್ರವಲ್ಲ, ಚುನಾವಣೆ ನಂತರದ ಹಸ್ತಕ್ಷೇಪಗಳಿಗೂ ಇದನ್ನು ಬಳಸಲಾಗುತ್ತದೆ.

ಹಾಗಾಗಿ, ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಜನರ ತೀರ್ಪುಗಳನ್ನು ಬದಲಿಸಲಾಗಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇದು ಹಲವಾರು ಬಾರಿ ಸಂಭವಿಸಿದೆ. ಚುನಾವಣಾ ಆಯೋಗದಂತಹ ಪ್ರಮುಖ ಸಂಸ್ಥೆಗಳ ಮೇಲೆ ಅನುಚಿತ ಪ್ರಭಾವ ಬೀರುವುದು ಚುನಾವಣಾ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಇನ್ನೊಂದು ವಿಧಾನವಾಗಿದೆ. ಸರಕಾರಿ ಯಂತ್ರದ ಅನುಚಿತ ಬಳಕೆ, ತೋಳ್ಬಲ ಮತ್ತು ಕ್ರಿಮಿನಲ್ ಶಕ್ತಿಗಳು ಅಥವಾ ಮಾಫಿಯಗಳ ಬಳಕೆ, ಇಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್‌ನಲ್ಲಿ ಹಸ್ತಕ್ಷೇಪ ಮಾಡುವುದು ಚುನಾವಣೆಯನ್ನು ದುರ್ಬಲಗೊಳಿಸುವ ಇತರ ವಿಧಾನಗಳಾಗಿವೆ. ಈ ಎಲ್ಲ ಚಟುವಟಿಕೆಗಳ ಮೇಲೆ ಜೋಪಾನವಾಗಿ ನಿಗಾ ಇಡಬೇಕು ಹಾಗೂ ವಿಶಾಲ ತಳಹದಿಯ ಪ್ರಜಾಸತ್ತಾತ್ಮಕ ಚಳವಳಿಯ ಮೂಲಕ ವಿರೋಧಿಸಬೇಕು.

ಕೃಪೆ: countercurrents.org

share
ಭರತ್ ಡೋಗ್ರಾ
ಭರತ್ ಡೋಗ್ರಾ
Next Story
X