ಮರಕಡ ಪರಶಕ್ತಿ ಕ್ಷೇತ್ರದ ಶ್ರೀ ನರೇಂದ್ರನಾಥ ಸ್ವಾಮೀಜಿ ನಿಧನ

ಮಂಗಳೂರು, ಜ.27: ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ಸ್ಥಾಪಕ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ(76) ಬುಧವಾರ ರಾತ್ರಿ 10:40ಕ್ಕೆ ನಿಧನರಾಗಿದ್ದಾರೆ.
ಇವರು ಮೂಲತಃ ಕೋಟೆಕಾರ್ ಸಮೀಪದ ಮಡ್ಯಾರ್ ನಿವಾಸಿಯಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಅಪರಾಹ್ನ 2:30ರವರೆಗೆ ಮರಕಡದ ಅವರ ಸ್ವಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಳಿಕ 3 ಗಂಟೆಯಿಂದ ಸಂಜೆ 5ರ ತನಕ ಮಡ್ಯಾರ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಅಲ್ಲಿಯೇ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





