ವಾರ್ನರ್, ಬ್ರಾವೋ ಬಳಿಕ 'ಪುಷ್ಪ' ಸಿನೆಮಾದ ಹೆಜ್ಜೆ ಹಾಕಿದ ಶಾಕಿಬ್: ವಿಡಿಯೋ ವೈರಲ್

Photo: Twitter/@FanCode
ಢಾಕಾ: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಚಲನಚಿತ್ರ 'ಪುಷ್ಪ: ದಿ ರೈಸಿಂಗ್' ಚಿತ್ರದ ಹಾಡಿಗೆ ಹೆಜ್ಜೆ ಹಾಕಿರುವ ಡೇವಿಡ್ ವಾರ್ನರ್, ಡ್ವೇನ್ ಬ್ರಾವೋ, ಸುರೇಶ್ ರೈನಾ ಅವರಂತಹ ಕ್ರಿಕೆಟಿಗರ ಸಾಲಿಗೆ ಶಾಕೀಬ್ ಅಲ್ ಹಸನ್ ಸೇರಿಕೊಂಡರು.
'ದಿ ರೈಸಿಂಗ್' ಪ್ರಪಂಚದಾದ್ಯಂತದ ಕ್ರಿಕೆಟಿಗರಲ್ಲಿ ಹಾಟ್-ಫೇವರಿಟ್ ಆಗಿ ಮುಂದುವರೆದಿದೆ. ಹೆಚ್ಚಿನ ಕ್ರಿಕೆಟಿಗರು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ವಾಕ್' ಚಲನಚಿತ್ರದ 'ಶ್ರೀವಲ್ಲಿ' ಹಾಡಿನ ನೃತ್ಯದ ಹೆಜ್ಜೆ ಹಾಕಿದ್ದರು. ಶಾಕಿಬ್ ಅದೇ ಚಿತ್ರದ ಮತ್ತೊಂದು ಪ್ರಸಿದ್ಧ ದೃಶ್ಯವನ್ನು ವಿಭಿನ್ನ ಸ್ಪರ್ಶದೊಂದಿಗೆ ಕಾಪಿ ಮಾಡಲು ನಿರ್ಧರಿಸಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಎಪಿಲ್) ಪಂದ್ಯದ ವೇಳೆ ಎಫ್ ಡು ಪ್ಲೆಸಿಸ್ ವಿಕೆಟ್ ಪಡೆದ ಬಳಿಕ ಶಾಕೀಬ್ ಅವರು ಅರ್ಜುನ್ ಅವರ ಶೈಲಿಯನ್ನು ಅನುಸರಿಸಿದರು.
ಇದನ್ನೂ ಓದಿ: ಟೆಸ್ಟ್ ನಾಯಕತ್ವಕ್ಕೆ ಉತ್ತರಾಧಿಕಾರಿ ಹೆಸರಿಸಿದ ಹರ್ಭಜನ್ ಸಿಂಗ್
ಬಾಂಗ್ಲಾದೇಶದ ಮಾಜಿ ನಾಯಕ ಹಾಗೂ ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿರುವ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾದ ಶಾಕೀಬ್ ಅವರು ಎಫ್ ಡು ಪ್ಲೆಸಿಸ್ ಔಟ್ ಮಾಡಿದ ನಂತರ ಈ ರೀತಿ ಸಂಭ್ರಮಿಸಿದರು. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
After Nazmul Islam, then @DJBravo47, and now the Bangladeshi @Sah75official displaying the #Pushpa move!
— FanCode (@FanCode) January 26, 2022
The @alluarjun movie has really taken over the #BBPL2022.
Catch these antics for just ₹5, LIVE on #FanCode https://t.co/lr5xUr0sLW#BPLonFanCode #alluarjun pic.twitter.com/9TAn8xqksr