ಕಾಣೆಯಾದ ಅರುಣಾಚಲ ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ ಚೀನಾ ಸೇನೆ: ಸಚಿವ ಕಿರಣ್ ರಿಜಿಜು

Photo: Twitter/TapirGao
ಹೊಸದಿಲ್ಲಿ: ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಹದಿಹರೆಯದ ಯುವಕನನ್ನು ಚೀನಾ ಸೇನೆಯು ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಇಂದು ಟ್ವೀಟ್ ಮಾಡಿದ್ದಾರೆ.
"ಚೀನಾದ ಪಿಎಲ್ಎ ಅರುಣಾಚಲ ಪ್ರದೇಶದ ಮಿರಾಮ್ ತರೋನ್ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ" ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.
ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಅಥವಾ ಪಿಎಲ್ಎ ತರೋನ್ ಅವರನ್ನು ಭಾರತಕ್ಕೆ ವಾಪಸು ಕಳುಹಿಸಲಾಗುವುದು ಎಂದು ಈ ಹಿಂದೆ ದೃಢಪಡಿಸಿತ್ತು. ಈ ಹಿಂದೆ ಪರ್ವತ ಪ್ರದೇಶದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಅವರನ್ನು ಸ್ವದೇಶಕ್ಕೆ ಕರೆತರಲು ವಿಳಂಬವಾಗಿತ್ತು.
ಜನವರಿ 25 ರಂದು ರಿಜಿಜು ಅವರು ಚೀನಾದ ಪಿಎಲ್ಎ, ತರೋನ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ ಎಂದು ಕೆಲವರು ವರದಿ ಮಾಡಿದ್ದಾರೆ ಎಂದು ಹೇಳಿಕೆಯೊಂದನ್ನು ಟ್ವೀಟ್ ಮಾಡಿದ್ದರು.
The Chinese PLA has handed over the young boy from Arunachal Pradesh Shri Miram Taron to Indian Army. Due procedures are being followed including the medical examination. https://t.co/xErrEnix2h
— Kiren Rijiju (@KirenRijiju) January 27, 2022







