ಮಾಹೆ ವಿವಿಯಲ್ಲಿ ಗಣರಾಜ್ಯೋತ್ಸವ

ಉಡುಪಿ, ಜ.27: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ದೇಶದ 73ನೇ ಗಣರಾಜ್ಯೋತ್ಸವನ್ನು ವಿವಿ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು. ಮಾಹೆ ವಿವಿ ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್ ಧ್ವಜಾರೋಹಣ ಮಾಡಿದರು.
ಮಾಹೆ ವಿವಿ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸಲರ್ ಡಾ.ವೆಂಕಟರಾಯ ಎಂ.ಪ್ರಭು ಮಾತನಾಡಿದರು. ಕಾರ್ಯನಿರ್ವಾ ಹಕ ಉಪಾಧ್ಯಕ್ಷ ಡಾ.ಎಚ್.ವಿನೋದ ಭಟ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು. ಇತ್ತೀಚೆಗೆ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಜ.ಬಿಪಿನ್ ರಾವತ್ ಅವರಿಗೆ ಒಂದು ನಿಮಿಷದ ವೌನ ಪಾರ್ಥನೆಯೊಂದಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.
Next Story