ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆ

ಮೈಸೂರು: ಜ.25ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ, ಕಾಕನಕೋಟೆ ಶಾಖೆಯ ಸುಳಿಬಳ್ಳೆ ಗಸ್ತಿನಲ್ಲಿ ಹುಲಿ ಮರಿಯ ಕಳೇಬರ ಪತ್ತೆಯಾಗಿದೆ.
ಈ ಅರಣ್ಯ ಪ್ರದೇಶದಲ್ಲಿ ಅಂದಾಜು 8-9 ತಿಂಗಳ ಪ್ರಾಯದ ಇನ್ನೊಂದು ಹುಲಿ ಮರಿಯ ಕಳೇಬರ ಕಂಡುಬಂದಿದ್ದು, ಒಟ್ಟು ಎರಡು ಹುಲಿ ಮರಿಗಳು (ಒಂದು ಹೆಣ್ಣು ಹುಲಿ ಮರಿ, ಇನ್ನೊಂದು ಹುಲಿ ಮರಿಯ ಲಿಂಗ ಪತ್ತೆಯಾಗಿರುವುದಿಲ್ಲ. ಲಿಂಗ ಪತ್ತೆ ಪರೀಕ್ಷೆಗಾಗಿ ಮಾದರಿಯನ್ನು ಪಡೆದುಕೊಳ್ಳಲಾಗಿದೆ) ಸಾವನ್ನಪ್ಪಿರುವುದು ಕಂಡುಬಂದಿರುತ್ತದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎಸ್.ಓ.ಪಿ ಯಂತೆ ಹುಲಿಯ ಮರಣೋತ್ತರ ಪರೀಕ್ಷೆ ನಡೆಸುವ ತಂಡವನ್ನು ರಚಿಸಿದ್ದು, ನಿಯಮಾನುಸಾರ ಈ ಹುಲಿ ಮರಿಗಳ ಮರಣೋತ್ತರ ಪರೀಕ್ಷೆಯನ್ನು ಡಿ ಮಹೇಶ್ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು, ಎಸ್ ಪಿ ಮಹದೇವ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗ, ಅಂತರಸಂತೆ, ಮಧು ಕೆ ಎಲ್, ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಲಯ, ಡಿ.ಬಿ.ಕುಪ್ಪೆ, ಸಿದ್ದರಾಜು ಎಸ್, ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಲಯ, ಅಂತರಸಂತೆ, ಡಾ. ರಮೇಶ ಹೆಚ್, ಪಶುವೈದ್ಯಾಧಿಕಾರಿಗಳು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು, ಡಾ. ಪ್ರಸನ್ನ ಬಿ ಬಿ, ಪಶುವೈದ್ಯಾಧಿಕಾರಿಗಳು, ವೆಟರ್ನರಿ ಡಿಸ್‍ಪೆನ್ಸರಿ, ಕಂಚಮಳ್ಳಿ, ಹೆಚ್.ಡಿ.ಕೋಟೆ ತಾಲೂಕು, ರಘುರಾಮ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಮ ನಿರ್ದೇಶಿತ ಪ್ರತಿನಿಧಿ ಹಾಗೂ ಕೃತಿಕಾ ಎ, ವನ್ಯಜೀವಿ ಪರಿಪಾಲಕರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮತ್ತು ಮಹಜರ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಚ್ಚಿನ ಪರೀಕ್ಷೆಗಾಗಿ ಸಂಗ್ರಹಿಸಲಾದ ಮಾದರಿಗಳನ್ನು ಸಂಬಂಧ ಪಟ್ಟ ಸಂಸ್ಥೆಗಳಿಗೆ ಕಳುಹಿಸಿ ಮಾಹಿತಿ ಪಡೆಯಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.







